ಸುದ್ದಿ9 ಕೈಕಂಬ: ದೇಶದಲ್ಲೇ ಮೊದಲು ಫಲಿತಾಂಶ ಪ್ರಕಟವಾಗಿದ್ದು ಅದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ. ಅಲ್ಲದೆ ಮೊದಲು ಮತ ಎಣಿಕೆಯೂ ಆರಂಭವಾಗಿದ್ದೂ ಕೂಡಾ ಮಂಗಳೂರು ಲೋಕಸಭಾ ಕ್ಷೇತ್ರದಲ್ಲೇ. ಟಿವಿ ಪರದೆಗಳಲ್ಲೂ ಇದೇ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿತ್ತು.

ಆರಂಭದಿಂದಲೇ ಮುನ್ನಡೆ ಸಾಧಿಸುತ್ತಾ ಬಂದಿದ್ದ ನಳಿನ್ ಕುಮಾರ್ ಕಟೀಲ್ ಅಂಚೆ ಮತಗಳಲ್ಲೂ ಪೂಜಾರಿಗಿಂತ ಮೇಲುಗೈ ಸಾಧಿಸುತ್ತಾ ಬಂದಿದ್ದರು. ಮಧ್ಯಾಹ್ನ ಹನ್ನೊಂದು ಗಂಟೆಯಾಗುತ್ತಾ ಬರುತ್ತಿದ್ದಂತೆ ನಳಿನ್ ಕುಮಾರ್ ಬಹುತೇಕ ಮುನ್ನಡೆ ಸಾಧಿಸುತ್ತಾ ಬಂದಿದ್ದು ಮಧ್ಯಾಹನ್ ಹನ್ನೆರಡು ಗಂಟೆ ಆಗುವ ಮೊದಲೇ ನಳಿನ್ ಕುಮಾರ್ ಕಟೀಲ್ ವಿಜಯೀಭವ ಎಂದು ಘೋಷಣೆಯಾಗಿತ್ತು. ಇಡೀ ದೇಶದಲ್ಲೇ ಮೊದಲು ಗೆದ್ದು ಬೀಗಿದ ಅಭ್ಯಥರ್ಿ ಅದು ನಳಿನ್ ಕುಮಾರ್ ಕಟೀಲ್. ಆನಂತರ ಬೇರೆ ಬೇರೆ ಕಡೆಗಳಲ್ಲಿ ಒಂದೊಂದೇ ಅಭ್ಯಥರ್ಿಗಳು ಗೆದ್ದು ಬರಲಾರಂಭಿಸಿದ್ದರು. ಒಟ್ಟಾರೆ ಹೇಳುವುದಾದರೆ ನಳಿನ್ ಕುಮಾರ್ ಕಟೀಲ್ ಅವರ ಬೋನಿ ಉತ್ತಮವಾಗಿತ್ತು.

nalin kumar kateel

ನಿಧಿ ವಿನಿಯೋಗದಲ್ಲಿ ನಂ. 1 ಆಗಿದ್ದ ನಳಿನ್:

ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರು ನಳಿನ್ ಕುಮಾರ್ ಕಟೀಲ್. ತನಗೆ ದೊರೆತ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದ್ದರು.

ದೇಶದ ಅತ್ಯತ್ತಮ ಸಂಸದರ ಪೈಕಿ ನಳಿನ್ಗೆ 6ನೇ ಸ್ಥಾನ:

ಇಡೀ ದೇಶದ ಅತ್ಯುತ್ತಮ ಸಂಸದರಾಗಿ ಗುರುತಿಸಿಕೊಂಡ ನಳಿನ್ ಕುಮಾರ್ ಕಟೀಲ್ ಧೇಶದಲ್ಲೇ ಆರನೇ ಸ್ಥಾನವನ್ನು ಪಡೆದುಕೊಂಡಿದ್ದರು. ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಿಕೊಂಡಿದ್ದಾರೆ ಎಂಬ ಹೆಸರನ್ನು ಇವರು ಪಡೆದಿದ್ದರು.

By suddi9

Leave a Reply

Your email address will not be published. Required fields are marked *