ಬಂಟ್ವಾಳ: ಕಳೆದ ಹಲವು ವರ್ಷಗಳಿಂದ ಈ ದೇಶದ ರಾಷ್ಟ್ರೀಯತೆ ಹಾಗೂ ಹಿಂದುತ್ವಕ್ಕೆ ಅನ್ಯಾಯ, ಅನಾಚಾರ, ಅತ್ಯಾಚಾರ ಮಾಡಿದಂತಹ ಜನ ಮತ್ತು ಸಕರ್ಾರಕ್ಕೆ ವಿರುದ್ದವಾದ ಜನಾದೇಶ ಈ ಚುನಾವಣೆಯಲ್ಲಿ ಸಿಕ್ಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ನಳೀನ್ ಕುಮಾರ್ ಕಟೀಲು ಅವರನ್ನು ಆಶೀರ್ವದಿಸಿ, ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಲ್ಲಿ ಜಾತೀಯ ವಿಷ ಬೀಜ ಬಿತ್ತುವ ಪ್ರಯತ್ನವನ್ನು ನಡೆಸಲಾಗಿತ್ತು. ಆದರೆ ಇಲ್ಲಿಯ ಜನ ರಾಷ್ಟ್ರೀಯತೆ ಹಾಗೂ ಹಿಂದುತ್ವಕ್ಕೆ ಮತ ನೀಡಿದ್ದಾರೆ ಎಂದರು. ಜಾತಿಯ ಹೆಸರಿನಲ್ಲಿ ಜಿಲ್ಲೆಯ ಜನತೆಯ ಒಗ್ಗಟ್ಟನು ಒಡಯುವ ಪ್ರಯತ್ನಕ್ಕೆ ತಡೆ ಉಂಟಾಗಿದೆ. ಇನ್ನು ಮುಂದೆ ದೇಶದಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ ಎಂದರು. ಬಿಜೆಪಿಯ ಕೆಲ ಗೊಂದಲಗಳಿಂದ, ಜನರ ನಿರೀಕ್ಷೆಯ ಮಟ್ಟಕ್ಕೆ ಕೆಲಸ ಮಾಡಿಲ್ಲ ಎನ್ನುವ ಕಾರಣದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ತಪ್ಪಿದಾಗ ಶಿಕ್ಷೆ ನೀಡುವ ರೀತಿಯಲ್ಲಿ ಮತದಾರ ಇರಬೇಕು. ಪರೀಕ್ಷೆ ಮಾಡಿ ಮತದಾನ ಮಾಡಬೇಕು ಆಗಾಲೇ ನಿಜವಾದ ಪ್ರಜಾಪ್ರಭುತ್ವ ಸಾಧ್ಯ ಎಂದ ಅವರು, ಈ ಬಾರಿ ಮತ್ತೆ ಜನ ಪರೀಕ್ಷಿಸಿ ಬಿಜೆಪಿಗೆ ಮತ ನೀಡಿದ್ದಾರೆ ಎಂದರು.

