ಮುಚ್ಚೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಶ್ರೀ ದೇವಳದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು ವಹಿಸಿದರು. ಕಟೀಲು ಅರ್ಚಕರು ಹರಿನಾರಾಯಣದಾಸ ಅಸ್ರಣ್ಣರು ಆರ್ಶಿವಚನ ನೀಡಿದರು. ಧಾರ್ಮಿಕ ಉಪನ್ಯಾಸವನ್ನು ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಮಾಡಿದರು.

ಮುಖ್ಯ ಅಥಿತಿಗಳಾಗಿ ಅನುವಂಶಿಕ ಆಡಳಿತ ಮೊಕ್ತೇಸರರು ಕೋಶಾಧಿಕಾರಿ ಮುಚ್ಚೂರು ಹರಿಭಟ್, ಕೈಕಂಬ ಉದ್ಯಮಿ ಹರಿಭಟ್, ಗುರುಪುರ ಗೋಳಿದಡಿಗುತ್ತು ಗಡಿಗಾರರು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಜಿ.ಪಂ.ಸದಸ್ಯರು ಜರ್ನಾಧನ ಗೌಡ, ಉಪಸ್ಥಿತರಿದ್ದರು.


