ಸುದ್ದಿ 9 ಕೈಕಂಬ; ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಅ  ಜನಾರ್ದನ ಪೂಜಾರಿಯವರ ವಿರುದ್ಧ ಭಾರೀ ಅಂತರಗಳಲ್ಲಿ ಜಯಭೇರಿ ಗಳಿಸಿದ್ದಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ  ರಥಬೀದಿಯಿಂದ ಹೊರಟ ವಿಜಯೋತ್ಸವದ ಮೆರವಣಿಗೆಯು ಪುಂಚಮೆ ,ಮಂಗಾಜೆ ,ಬಡಕಬೈಲು ಮಾರ್ಗವಾಗಿ ತೆರಳಿ ಅಮ್ಮುಂಜೆ  ಶ್ರೀ ವಿನಾಯಕ ದೇವಸ್ಥಾನದಿಂದ ಕಲ್ಲಗುಡ್ಡೆ , ಕಾವೇಶ್ವರ , ಬಡಗಬೆಳ್ಳೂರು ಕೊಳತ್ತಮಜಲು, ಸಾಣೂರುಪದವು, ಪಲ್ಲಿಪಾಡಿ ಕರಿಯಂಗಳದಿಂದ  ಅಡ್ಡೂರು, ಕಾಂಜಿಲಕೋಡಿ, ನೂಯಿ , ಕೈಕಂಬ ದವರೇಗೆ ಪೊಳಲಿ ಬಿಜೆಪಿ  ಕಾರ್ಯಕರ್ತರು ಮೆರಣಿಗೆಯ ಮೂಲಕ    ದಿಜೆ. ನಾಸಿಕ್ಖು ಬ್ಯಾಂಡ್ ನೊಂದಿಗೆ  ಕುಣಿದು ಸಂಭ್ರಮ ಪಟ್ಟರು. ಗುರುಪುರಕೈಕಂಬ ದಿಂದ ಹೊರಟ ಮೆರವಣಿಗೆ ಕೈಕಂಬ ಮಾರ್ಗವಾಗಿ ಗಂಜಿಮಠದಿಂದ ಎಡಪದವುನವರೆಗೆ ಮುಂದುವರಿಯಿತು.
ಗಂಜಿಮಠ ಸುರಲ್ಪಾಡಿಯ ಮಸೀದಿಯ ಹತ್ತಿರ  ಪಟಾಕಿ ಸಿಡಿಸಿದಕ್ಕೆ ಆಕ್ಷೇಪ
ಬಿಜೆಪಿ ಅಭ್ಯರ್ಥಿ  ನಳಿನ್ ಕುಮಾರ್ ಕಟೀಲ್ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಪೂಜಾರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಖುಷಿಯಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪಟಾಕಿ ಸಿಡಿಸಿದಕ್ಕೆ ಮಸೀದಿ ಆಡಳಿತ ಮಂಡಳಿ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಂಭವಿಸಿದೆ.

10

11

12

4

5

6

7

8

9

5v

1v

2v

3v

4v

ಕೈಕಂಬದಿಂದಲೇ ಭರ್ಜರಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ಕಾರ್ಯಕರ್ತರು ಸೂರಲ್ಪಾಡಿ ಮಸೀದಿಯ ಸಮೀಪಕ್ಕೆ ಬಂದಿದ್ದರು. ಇಲ್ಲಿಯೂ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರನ್ನು ಕಂಡು ಸಿಟ್ಟಿಗೆದ್ದ ಮಸೀದಿಯೊಳಗಿದ್ದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಜೊತೆ ಮಾತಿನ ಚಕಮಕಿ ನಡೆಸಿದ ಮಸೀದಿಯೊಳಗಿನಿಂದ ಬಂದ ಕಾರ್ಯಕರ್ತರ ವರ್ತನೆಯಿಂದ ಸ್ಥಳದಲ್ಲಿ ಕೊಂಚ ಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು. ಆದರೆ ಮೆರವಣಿಗೆಯಲ್ಲಿದ್ದ ಕೆಲವು ಬಿಜೆಪಿ ಮುಖಂಡರು ಮಸೀದಿಯವರನ್ನು ಸಮಧಾನಿಸಲು ಮೂಂದಾದರು.
ಇಷ್ಟೊತ್ತಿಗೆ ಈ ಸುದ್ದಿ ಬಜ್ಪೆ ಪೊಲೀಸರಿಗೂ ಹೋಗಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಇತ್ತಂಡಗಳನ್ನೂ ಸಮಧಾನ ಪಡಿಸಿ ಮೆರವಣಿಗೆಗೆ ದಾರಿ ಮಾಡಿಕೊಟ್ಟಿದ್ದಾರೆ. ಸೂರಲ್ಪಾಡಿ ಕೋಮುಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಹಿಂದೂ-ಮುಸ್ಲಿಮರ ಮಧ್ಯೆ ಚಿಕ್ಕಪುಟ್ಟ ವಿಷಯಕ್ಕೆ ವಾಗ್ವಾದ ನಡೆಯುತ್ತಾ ಇರುತ್ತದೆ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *