ಕೈಕಂಬ: ಸೌಹಾರ್ದ ಬದುಕಿನಿಂದ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಗುರುಪುರ-ಕೈಕಂಬ ಸ್ನೇಹಸದನ ಸಂಸ್ಥೆ ಮುಖ್ಯಸ್ಥ ಫಾ.ವಂದನೀಯ ಅಂತೋನಿ ಅಭಿಪ್ರಾಯಪಟ್ಟರು.ಬುಧವಾರ ಸಂಜೆ ರೋಸಾಮಿಸ್ತಿಕಾ ಶಾಲಾ ಮೈದಾನದಲ್ಲಿ ಪೊಂಪೈ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಇದರ ವತಿಯಿಂದ ಬಡವರ ಸಹಯಾರ್ಥಕವಾಗಿ ನಡೆದ ಬಂಗಾರ್ ತುಳುನಾಟಕದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾನು,ತನ್ನದೆಂದು ಮರೆತು ಸಮಾಜಕ್ಕಾಗಿ,ಸಮಾಜದ ಬಡವರಿಗಾಗಿ ಜಾತಿ,ಧರ್ಮ ಭೇದ ಭಾವ ತೊರೆದು ಸಹಾಯಹಸ್ತ ನೀಡಿದಾಗ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕಲು ಸಾಧ್ಯವೆಂದು ಹೇಳಿದರು. ತಾನು,ತನ್ನದೆಂದು ಮರೆತು ಸಮಾಜಕ್ಕಾಗಿ,ಸಮಾಜದ ಬಡವರಿಗಾಗಿ ಜಾತಿ,ಧರ್ಮ ಭೇದ ಭಾವ ತೊರೆದು ಸಹಾಯಹಸ್ತ ನೀಡಿದಾಗ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕಲು ಸಾಧ್ಯವೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪೊಂಪೈ ಚರ್ಚ್ ಕಂದಾವರದ ಧರ್ಮಗುರುಗಳು ಫಾ.ವಂದನೀಯ ಪೌಲ್ ಪಿಂಟೋ,ಜೀವದಾನ ಸಂಸ್ಥೆಯ ಸಿಸ್ಟರ್ ಸಮೀನಾ,ರೋಸಾ ಮಿಸ್ತಿಕಾ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಜೂಲಿಯಾನ ಮೋರಿಸ್,ಪೊಂಪೈ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಜೆಪ್ರಿಯಾನ್ ತಾವ್ರೊ,ಕಾರ್ಯದರ್ಶಿ ರಿಚರ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.ಈ ಸಂದರ್ಭ ಜೀವದಾನ ಸಂಸ್ಥೆಗೆ ಒಂದು ಲಕ್ಷ ರೂಪಾಯಿ ಮತ್ತು ಇತರ ಬಡವರಿಗೆ ಸಹಾಯದಾನ ಮಾಡಲಾಯಿತು,ನಂತರ ಬಡವರ ಸಹಯಾರ್ಥಕವಾಗಿ ದೇವದಾಸ್ ಕಾಪಿಕಾಡ್ ತಂಡದ ಬಲೇ ಚಾಪರ್ಕ ಕಲಾವಿದರಿಂದ ಬಂಗಾರ್ ತುಳು ನಾಟಕ ಪ್ರದರ್ಶನಗೊಂಡಿತು.



