ಮೂಡಬಿದರೆ  : ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಜರಗುತ್ತಿರುವ ಜೀಣೋದ್ಧಾರ ಕಾಮಗಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಬುಧುವಾರ ವೀಕ್ಷಿಸಿದರು. ಬಳಿಕ ಅವರು ದೇವಳದ ಆಡಳಿತ ಮಂಡಳಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಗಳ ಪ್ರಮುಖರೊಂದಿಗೆ ಪೂರ್ವತಯಾರಿಗಳ ಬಗ್ಗೆ ಸಮಲೋಚನೆ ನಡೆಸಿದರು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಮುಚ್ಚೂರು ಹರಿ ಭಟ್, ಪ್ರಧಾನ ಅರ್ಚಕ ಅನಂತ ಭಟ್, ಸಮಿತಿಯ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಮುಕ್ತಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ, ರಾಮಚಂದ್ರ ಭಟ್, ರಘುಪತಿ ಭಟ್, ಶ್ರೀನಿವಾಸ ಭಟ್ ಮತ್ತಿತರರು ಉಪಸ್ಥಿತರಿದ್ಧರು. ಬಳಿಕ ಎಲ್ಲಾ ಸಮಿತಿಗಳ ಪೂರ್ವ ಸಿದ್ಧತಾ ಸಭೆ ಜರಗಿತು.

???????????????????????????????

???????????????????????????????

???????????????????????????????

???????????????????????????????

???????????????????????????????ಇಂದು ಉಗ್ರಾಣ ಮುಹೂರ್ತ:
ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.5 ಶುಕ್ರವಾರ ಬೆಳಿಗ್ಗೆ ಧಾರ್ಮಿಕ ವಿಗಳ ಸಾಮೂಹಿಕ ಪ್ರಾರ್ಥನೆ ತೋರಣ ಮುಹೂರ್ತದೊಂದಿಗೆ ಪ್ರಾರಂಭಗೊಳ್ಳುತ್ತದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಅವರು ಧಾರ್ಮಿಕ ವಿಪೂರ್ವಕ ಉಗ್ರಾಣ ಮುಹೂರ್ತ ನೆರವೇರಿಸಲಿದ್ಧಾರೆ. ಸಂಜೆ 6ಕ್ಕೆ ನೂತನ ಶಿಲಾಮಯ ತೀರ್ಥ ಮಂಟಪವನ್ನು ಮುಚ್ಚೂರು ಬಳಿಕ ಕುಟುಂಬಸ್ಥರ ವತಿಯಿಂದ ಸಮರ್ಪಿಸಲಾಗುವುದು. ಬಳಿಕ ಧಾರ್ಮಿಕ ಸಭೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿದೆ.

By suddi9

Leave a Reply

Your email address will not be published. Required fields are marked *