ಬಂಟ್ವಾಳ : ಸರಕಾರಿ ಪ್ರೌಢಶಾಲೆ ಪಂಜಿಕಲ್ಲು ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಚಿಕ್ಕಮಂಗಳೂರಿನ ತರಿಕೆರೆ ತಾಲೂಕಿ ಸರಕಾರಿ ಪೌಢಶಾಲೆ ಆದಿಕೆರೆ ಇಲ್ಲಿಗೆ ವರ್ಗಾವಣೆಗೊಂಡ ಗಿರೀಶ್ ಟಿ.ಪಿ ಇವರಿಗೆ ಬೋಳ್ಕೊಡುವ ಸಮಾರಂಭ ನಡೆಯಿತು.
ಭೂ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುದರ್ಶನ್ ಜೈನ್ ರವರು ಗಿರೀಶ್ ರವರಿಗೆ ಫಲಪುಷ್ಪಕಾಣಿಕೆಯನ್ನಿತ್ತು ಸನ್ಮಾನಿಸಿದರು. ಸ್ಥಳದಾನಿ ದೇವಪ್ಪ ಕುಲಾಲ್ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು , ಪೋಷಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ದುರ್ಗಾಪ್ರಸಾದ್ ಸ್ವಾಗತಿಸಿದರು . ಮಾರ್ಕ್ ಎ.ಎಫ್.ಪಿಂಟೋ ವಂದಿಸಿ ಕೃಷ್ಣವೇಣಿ ಕಾರ್ಯಕ್ರಮ ನಿರ್ವಹಿಸಿದರು.
