ಮೂಡುಬಿದರೆ: ಮೂರು ಶತಮಾನಗಳ ಇತಿಹಾಸ ಹೊಂದಿರುವ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ನಲ್ಲಿ ವಾರ್ಷಿಕ ಹಬ್ಬವು ಬುಧವಾರ ನಡೆಯಿತು. ಚರ್ಚ್ನ ನಿಕಟಪೂರ್ವ ಧರ್ಮಗುರುಗಳಾದ ರೆ.ಫಾ ಆಸಿಸಿ ರೆಬೆಲ್ಲೋ ಬಲಿಪೂಜೆ ನೆರವೇರಿಸಿದರು.

ಮೂಡುಬಿದರೆ ಕ್ರೈಸ್ತ ಧರ್ಮಪ್ರಾಂತ್ಯದ ಮುಖ್ಯ ಗುರು ಆಸ್ಟಿನ್ ಪೀಟರ್ ಪೆರಿಸ್, ಹೊಸಬೆಟ್ಟು ಚರ್ಚ್ನ ಧರ್ಮಗುರು ಸಂತೋಷ್ ರೊಡ್ರಿಗಸ್, ವಿವಿಧ ಚರ್ಚ್ಗಳ 32 ಧರ್ಮಗುರು ಹಾಗೂ ಭಕ್ತರು ಭಾಗವಹಿಸಿದರು.


