ಗಂಜಿಮಠ :ಸೌರ್ಹಾದತಯುತ ಸಮಾಜಮುಖಿ ಜೀವನ ದೇಶದ ಅಭಿವೃದ್ಧಿಗೆ ಪೂರಕ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮ ಕ್ಷೇತ್ರದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.ಅವರು ಇತ್ತೀಚಿಗೆ ಗಂಜಿಮಠ ಬಳಿ ಮಳಲಿಕ್ರಾಸ್‍ನಲ್ಲಿ ನಡೆದ ಅಳಿಕೆ ಫ್ರೆಂಡ್ಸ್ ಇದರ 5ನೇ ವರ್ಷದ ವಾರ್ಷಿಕೋತ್ಸವದಲ್ಲಿ ಆಶೀರ್ವಚನವಿತ್ತು ಮಾತನಾಡಿದರು.ಸಮಾಜದಲ್ಲಿ ಸರ್ವರು ಸಮಾನ ರೀತಿಯ ಚಿಂತನೆಗಳನ್ನು ಹೊಂದಿಕೊಂಡು ರಾಷ್ಟ್ರ ಪ್ರೇಮದ ಜೊತೆಗೆ ಸಮಾಜಕ್ಕಾಗಿ ಬಾಳುವ ಯೋಚನೆಗಳು ಬಂದಾಗ ಸಮಾಜ ಬದಲಾಗುತ್ತೆ,ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
bjp feb=2=1ಮುಖ್ಯ ಅತಿಥಿಯಾಗಿದ್ದ ಬಜ್ಪೆ ಠಾಣಾ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ಮಾತನಾಡಿ ಸಮಾಜದ ಒಳಿತಿನ ಚಿಂತನೆಗಳನ್ನು ಹೊಂದಿಕೊಂಡು ವ್ಯಕ್ತಿಗತವಾಗಿ ಸುಧಾರಣೆಯಾದಗ,ಸಮಾಜ ಕೆಡುಕು ಮುಕ್ತವಾಗುತ್ತದೆ ಎಂದರು.
ಸಭಾಧ್ಯಕ್ಷತೆಯನ್ನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪಿ.ಕರುಣಾಕರ ಆಳ್ವ ವಹಿಸಿದ್ದು,ಮುಖ್ಯ ಅತಿಥಿಗಳಾಗಿ ನಮ್ಮ ಟಿವಿ ನಿರ್ದೇಶಕ ಶಿವಚರಣ್ ಶೆಟ್ಟಿ,ಉದ್ಯಮಿಗಳಾದ ಭಾಸ್ಕರ್ ಭಟ್ ಗಂಜಿಮಠ,ನೌಷಾದ್ ಹಾಜಿ,ಸುಧಾಕರ್ ಪೂಂಜ,ದೀಪಕ್ ಅಮೀನ್,ಪದ್ಮನಾಭ ಸಾಲ್ಯಾನ್,ಹರೀಶ್ ಶೆಟ್ಟಿ ಕೊಲ್ಪೆ,ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲತಿ.ಎಂ,ಚಂದ್ರಹಾಸ್ ಶೆಟ್ಟಿ ನಾರಳ,ಬಾಷಾ ಮಾಸ್ಟ್ರ್,ಅಳಿಕೆ ಫ್ರೆಂಡ್ಸ್ ಗೌರವಾಧ್ಯಕ್ಷ ರಾಜೇಂದ್ರ ಶೆಟ್ಟಿ ಅಳಿಕೆ,ಅಧ್ಯಕ್ಷ ಸುರೇಶ್ ಶೆಟ್ಟಿ ಅಳಿಕೆ,ಉಪಾಧ್ಯಕ್ಷ ಉಮೇಶ್ ಜೋಗಿ,ಲಕ್ಷ್ಮಣ್ ಪೂಜಾರಿ,ಯತೀಶ್,ರಾಜೇಶ್ ಶೆಟ್ಟಿ,ರಾಜೇಂದ್ರ ಆಳ್ವ,ಹರೀಶ್ ಪೂಜಾರಿ,ಸುನೀಲ್ ಮನೋಜ್ ಫೆರ್ನಾಂಡೀಸ್ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *