ಕೈಕಂಬ: ಶ್ರೀ ರಾಮಕೃಷ್ಣ ತಪೋವನದಲ್ಲಿ ವೀರಸನ್ಯಾಸಿ, ವಿಶ್ವವಿಜೇತ, ವಿಶ್ವಮಾನವ, ಮಹಾನ್ ದೇಶಭಕ್ತ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನವನ್ನು ಹಾಗೂ ಬಾಲಾಕಾಶ್ರಮದ ವಾರ್ಷಿಕೋತ್ಸವವನ್ನು  ಜ.31ನೇ  ಭಾನುವಾರ ಆಶ್ರಮದಲ್ಲಿ ಆಚರಿಸಲಾಗುವುದು.
ಕಾರ್ಯಕ್ರಮಗಳು  ಬೆಳಗ್ಗೆ. 6-30ಕ್ಕೇ ವಿಷ್ಣು ಸಹಸ್ರನಾಮ ಪಾರಾಯನ ಬೆಳಗ್ಗೆ 8-30ಕ್ಕೆ ವಿಶೇಷ ಭಜನೆ ಬೆಳಗ್ಗೆ 9-30ಕ್ಕೆ ಹೋಮ ಮಧ್ಯಾಹ್ನ 12-15ಕ್ಕೆ ಆರತಿ ಮಧ್ಯಾಹ್ನ 12-30ಕ್ಕೆ ಅನ್ನಪ್ರಸಾದ ಜರಗಲಿದೆ.

 ಸಭಾಕಾರ್ಯಕ್ರಮದ  ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಚೈತನ್ಯಾನಂದ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್. ವಿನಯ ಹೆಗ್ಡೆ ಭಾಗವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ  ಬೆಂಗಳೂರು ಉಷಾ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಜಯಶೀಲ ಅಡಪ,   ಬೆಂಗಳೂರು ಗೈಲ್ವನೊ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀಧರ್ ಭಾಗವಹಿಸಲಿದ್ದಾರೆ. ನಂತರ ಬಾಲಕಾಶ್ರಮದ ವಿದ್ಯಾರ್ಥಿಗಳಿಂದ ವಿವಿಧ  ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಲಿರುವುದು.

By suddi9

Leave a Reply

Your email address will not be published. Required fields are marked *