ಮೂಡುಬಿದಿರೆ: ಶ್ರೀ ರಾಮಕ್ಷತ್ರಿಯ ಸೇವಾ ಸಂಘ, ಶ್ರೀ ರಾಮಕ್ಷತ್ರಿಯ ಮಹಿಳಾ ವೃಂದ, ಯುವ ವೃಂದ ಮತ್ತು ಭಜನಾ ಸಮಿತಿಯ ಇವುಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಮಂಗಳೂರು ಎಸ್‍ಡಿಎಂ ಲಾ ಕಾಲೇಜಿನ ಸಹ ಪ್ರಾಧ್ಯಾಪಕ ಸಾಯಿನಾಥ ಮಲ್ಲಿಗೆ ಮಾಡು ಸಮಾರಂಭವನ್ನು ಉದ್ಘಾಟಿಸಿದರು.
28mood Ramakshatriyaಮಂಗಳೂರು ಶ್ರೀ ರಾಮಕ್ಷತ್ರಿಯ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಜೆ.ರವೀಂದ್ರ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಶ್ರೀ ರಾಮಕ್ಷತ್ರಿಯ ಸಮಾಜದ ಕುಲಪುರೋಹಿತ ಉಡುಪಿ ಮಾಧವ ಭಟ್ ಮತ್ತು ನಿವೃತ್ತ ಶಿಕ್ಷಕ ಎ.ಪ್ರಭಾಕರ ರಾವ್ ಪೆರಿಂಜೆ ಇವರನ್ನು ಈ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ವಿದ್ಯಾರ್ಥಿ ಸಾಧಕರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ರಾಮಕ್ಷತ್ರಿಯ ಸೇವಾ ಸಂಘದ ಗೌರವಾಧ್ಯಕ್ಷ ನಿತ್ಯಾನಂದ ಕೋಟೆ, ಮಹಿಳಾ ಸಂಘದ ಅಧ್ಯಕ್ಷೆ ಶಶಿಕಲಾ ಸುರೇಂದ್ರ, ಕಾರ್ಯದರ್ಶಿ ಶಾಂತಿ ಗಣೇಶ್, ಯುವ ವೃಂದದ ಅಧ್ಯಕ್ಷ ಸೂರ್ಯ ಆರ್.ರಾವ್, ಕಾರ್ಯದರ್ಶಿ ಸಂದೇಶ್ ಕೆ.ರಾವ್ ಹಾಗೂ ಭಜನಾ ಮಂಡಳಿಯ ಭವಾನಿ ಶಂಕರ್ ಉಪಸ್ಥಿತರಿದ್ದರು.
ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ರಾವ್, ಎಡನೀರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಸುರೇಂದ್ರ ಅತ್ತಾವರ ಸ್ವಾಗತಿಸಿದರು. ಕಾರ್ಯದರ್ಶಿ ಬಾಲಕೃಷ್ಣ ರಾವ್ ವಾರ್ಷಿಕ ವರದಿ ವಾಚಿಸಿದರು. ಮಹಿಳಾ ಸಂಘದ ಗೌರವಾಧ್ಯಕ್ಷೆ ಪ್ರೇಮಾ ಚಂದ್ರಶೇಖರ ರಾವ್ ಮತ್ತು ಯುವ ವೃಂದದ ಜೊತೆ ಕಾರ್ಯದರ್ಶಿ ಸಂತೋಷ್ ರಾವ್ ಸನ್ಮಾನಿತರ ಪ್ರಶಸ್ತಿ ಪತ್ರವನ್ನು ವಾಚಿಸಿದರು. ಮಹಿಳಾ ಸಂಘದ ಜತೆ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಸಂಘಟಕ ನವೀನ್ ಕುಮಾರ್ ಕೊಡಂಗಲ್ಲು ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

By suddi9

Leave a Reply

Your email address will not be published. Required fields are marked *