ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಲೆತ್ತೂರು ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಈಚೆಗೆ ನಡೆದ ಐದನೇ ವರ್ಷದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಮೆಲ್ಕಾರ್ ಸಂಚಾರಿ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರಯ್ಯ ಮತ್ತು ಅಕ್ಷರ ಸಂತ ಹರೆಕಳ ಹಾಜಬ್ಬ ಅವರನ್ನು ಮಾಣಿಲ ಮೋಹನದಾಸ ಸ್ವಾಮೀಜಿ ಸನ್ಮಾನಿಸಿದರು.
ಪುರೋಹಿತ ಕೇಶವ ಶಾಂತಿ ನಾಟಿ, ಸಮಿತಿ ಗೌರವಾಧ್ಯಕ್ಷ ನೇಮಿರಾಜ ಶೆಟ್ಟಿ, ಬೇಬಿ ಕುಂದರ್, ಮಚ್ಚೇಂದ್ರ ಸಾಲಿಯಾನ್, ಉದ್ಯಮಿ ಗೋಪಾಲ ಸುವರ್ಣ, ಜಿ.ಆನಂದ, ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ಮತ್ತಿತರರು ಇದ್ದರು.
