ಮೂಡುಬಿದರೆ: ಶತಮಾನೋತ್ಸವ ಸಂಭ್ರಮದಲ್ಲಿರುವ ಮೂಡುಬಿದರೆಯ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ಗೆ ಪೇಜಾವರ ಶ್ರೀಗಳವರು ಅನುಗ್ರಹ ಭೇಟಿ ನೀಡಿದರು.

ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ-ಜಯಶ್ರೀ ಅಮರನಾಥ ಶೆಟ್ಟಿ ದಂಪತಿ ಆಡಳಿತ ಮಂಡಳಿಯ ಪರವಾಗಿ ಶ್ರೀಗಳವರನ್ನು ಸಮ್ಮಾನಿಸಿ ಆರತಿ ಬೆಳಗಿ ಗೌರವಿಸಿದರು. ವ್ಯಕ್ತಿಗಳಿಗೆ ಆಯಸ್ಸು ಹೆಚ್ಚಿದರೆ ಜೀವಭಯ. ಆದರೆ ಸಂಸ್ಥೆಗಳಿಗೆ ನಿರ್ಭಯ. ಸೊಸೈಟಿ ಬ್ಯಾಂಕು ಚಿರಂಜೀವಿಯಾಗಲಿ. ಗ್ರಾಹಕರಿಗೆ ಹೆಚ್ಚಿನ ಸೇವೆ, ಎಲ್ಲರ ಅಭಿವೃದ್ಧಿ ಸಾಧ್ಯವಾಗಲಿ ಎಂದು ಹರಸಿದರು. ಬ್ಯಾಂಕಿನ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್,ಸಿಬಂದಿಗಳು ಉಪಸ್ಥಿತರಿದ್ದರು.
