ಮುಂಬಯಿ, ಜ.15: ಉಡುಪಿ ಜಿಲ್ಲೆಯ ಬಾರ್ಕೂರು ಕಚ್ಚೂರು ಗ್ರಾಮದ ಸಿಂಹಾಸನ ಗುಡ್ಡೆಯ ಅರಮನೆ ಹನುಂತ ದೇವಸ್ಥಾನದ ಆವರಣದಲ್ಲಿನ ದೇವಾಡಿಗರ ಆರಾಧ್ಯ ದೇವತೆ ಎಂದೆಣಿಸಿದ ಶ್ರೀ ಏಕನಾಥೇಶ್ವರೀ ದೇವಸ್ಥಾನಕ್ಕೆ ಇದೇ ಜ.21ರ ಗುರುವಾರ ಬೆಳಿಗ್ಗೆ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಶ್ರೀ ಏಕನಾಥೇಶ್ವರೀ ದೇವಸ್ಥಾನದ ವಿಶ್ವಸ್ಥ ಮತ್ತು ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಮುಂಬಯಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆ ಅವರ ಶುಭಾಶಿರ್ವಾದಗಳೊಂದಿಗೆ ವಿದ್ವಾನ್ ಲಕ್ಷಿ ್ಮೀನಾ ರಾಯಣ ಸೋಮಾಯಜಿ ಶಿಲಾನ್ಯಾಸ ಪೂಜೆ ನಡೆಸಲಿದ್ದಾರೆ. ಅಂದಿನ ಧಾರ್ಮಿಕ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊೈಲಿ ಮತ್ತು ಮಾಲತಿ ವಿ. ಮೊೈಲಿ ದಂಪತಿ, ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಗೌರವ ಅತಿಥಿüಗಳಾಗಿ ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರಮೋದ್ ಮಧ್ವರಾಜ್, ಎಂಎಲ್‍ಸಿ ಕೋಟ ಶ್ರೀನಿವಾಸ ಪೂಜಾರಿ, ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಡಿ’ಸೋಜಾ, ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿಗಳಾದ ಡಾ| ಜಿ.ಶಂಕರ್, ಬಿ.ಶಾಂತರಾಮ್ ಶೆಟ್ಟಿ, ಕೆ.ವಿಶ್ವನಾಥ ಭಂಡಾರಿ, ಶ್ರೀನಿವಾಸ ಶೆಟ್ಟಿಗಾರ್, ಬಾಬು ಶಿವ ಪೂಜಾರಿ, ನಿವೃತ್ತ ಉಪನ್ಯಾಸಕ ಡಾ| ಬಿ.ಮಂಜುನಾಥ ಸೋಮಾಯಜಿ, ಧರ್ಮದರ್ಶಿಗಳಾದ ಕೃಷ್ಣಪ್ಪ ಉಪ್ಪೂರು, ಯೋಗೀಶ್ ಆಚಾರ್ಯ, ಬಿ.ಮಂಜುನಾಥ ರಾವ್, ಪ್ರಸಾದ್ ಭಟ್, ಕೆ.ಗೋಪಾಲ ರಾವ್ ಕಿನ್ನಿಗೋಳಿ, ಡಿ.ಎಸ್ ಚೆನ್ನಪ್ಪ, ಅನಂತ ಪದ್ಮನಾಭ, ಸತ್ಯನಾರಾಯಣ ಉಡುಪ, ಕೆ.ಮಧುಸೂಧನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಗೌರವ ಕೋಶಾಧಿಕಾರಿ ಆಗಿ ಜನಾರ್ಧನ ದೇವಾಡಿಗ ಬಾರ್ಕೂರು ತಿಳಿಸಿದ್ದಾರೆ.

image description

Palimaarushree

Palimaru Swamiji

ಶೀಘ್ರವೇ ದೇವಸ್ಥಾನ ನಿರ್ಮಾಣಕ್ಕಾಗಿ ಶ್ರೀ ಏಕನಾಥೇಶ್ವರೀ ದೇವಸ್ಥಾನದ ವಿಶ್ವಸ್ಥರು ಮತ್ತು ಅಧ್ಯಕ್ಷರ ಬಿ.ಅಣ್ಣಯ್ಯ ಶೇರಿಗಾರ್ ಪುಣೆ, ಉಪಾಧ್ಯಕ್ಷರುಗಳಾಗಿ ನಾರಾಯಣ ಎಂ.ದೇವಾಡಿಗ, ಹರೀಶ್ ಶೇರಿಗಾರ್, ದಿನೇಶ್ ಬಿ.ದೇವಾಡಿಗ ದುಬಾಯಿ, ಜನಾರ್ದನ ಎಸ್.ದೇವಾಡಿಗ ಮುಂಬಯಿ ಮತ್ತು ಎನ್. ರಘುರಾಮ ದೇವಾಡಿಗ ಶಿವಮೊಗ್ಗ ಹಾಗೂ ಹದಿನಾರು ಗೌರವ ಸಲಹಾದಾರರು ಮತ್ತು ದೇವಸ್ಥಾನ ನಿರ್ಮಾಣ ಸಮಿತಿ ಸದಸ್ಯರುಗಳು, ವಲಯ ಸಮಿತಿಗಳ ಮುಖ್ಯಸ್ಥರುಗಳು, ವಿವಿಧ ದೇವಾಡಿಗ ಸಂಸ್ಥೆಗಳ ಮುಖ್ಯಸ್ಥರುಗಳು ಶ್ರಮಿಸುತ್ತಿದ್ದಾರೆ.

ಈ ಅರಮನೆ ಹನುಂತ ದೇವಸ್ಥಾನದಲ್ಲಿ 2012ರ ವೇಳೆಗೆ ಹೆಸರಾಂತ ಜ್ಯೋತಿಷಿ ಶ್ರೀಧರ ಗೋರೆ ನೆಲ್ಯಾಡಿ ಅವರ ನೇತೃತ್ವ ಮತ್ತು ದೇವಸ್ಥಾನ ಅಷ್ಟಮಂಗಲ ಸಮಿತಿಯ ಮುಖ್ಯಸ್ಥರ ಸಮಕ್ಷಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ತಿಳಿದಂತೆ ಸಮಸ್ತ ದೇವಾಡಿಗ ಸಮಾಜದ ಕುಲದೇವತೆ ಎಂದೆಣಿಸಿದ ಶ್ರೀ ಏಕನಾಥೇಶ್ವರಿ ಅಮ್ಮನವರ ಮತ್ತು ಮಾತೆಯ ಪರಿವಾರ ಶಕ್ತಿಗಳಾಗಿ ಶ್ರೀ ರಕ್ತೇಶ್ವರಿ ಮತ್ತು ಗುಳಿಗೆ ಕೂಡಾ ಕಂಡು ಬಂದಿರುವ ಬಗ್ಗೆ ಅಷ್ಟಮಂಗಲ ಸಮಿತಿ ತಿಳಿಸಿದ್ದು ಅಂತೆಯೇ ಆ ನಿಮಿತ್ತ ಜಗತ್ತಿನಾದದ್ಯಾಂತ ನೆಲೆಯಾಗಿರುವ ದೇವಾಡಿಗ ಸಮಾಜ ಬಾಂಧವರು ಭವಿಷ್ಯತ್ತಿನಲ್ಲಿ ಶ್ರೀ ಏಕನಾಥೇಶ್ವರಿ ಅಮ್ಮನವರನ್ನು ಕುಲದೇವತೆ ಎಂದೂ ಆರಾಧಿಸುವಂತೆ ಅಂದು ಮಾನವಿ ಮಾಡಿರುವುದನ್ನು ಧರ್ಮಪಾಲ್ ದೇವಾಡಿಗರು ನೆನಪಿಸಿರುವರು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ಜಗತ್ತಿನಾದ್ಯಂತ ನೆಲೆಯಾಗಿರುವ ದೇವಾಡಿಗ ಸಮಾಜದ ಸರ್ವ ಬಾಂಧವರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯಾಧಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದೇವಸ್ಥಾನ ಸಮಿತಿ ಗೌ| ಪ್ರ| ಕಾರ್ಯದರ್ಶಿ ನರಸಿಂಹ ಬಿ.ದೇವಾಡಿಗ ಉಡುಪಿ ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *