ಜೋಗರ್ಸ್ ಪಾರ್ಕ್‍ನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ
ಮುಂಬಯಿ, : ಕಾಂದಿವಲಿ ಬೊರಿವಿಲಿ ಫ್ರ್ರೆಂಡ್ಸ್ ಅಸೋಸಿಯೇಶನ್ ಇದೇ ಜ.16 ಶನಿವಾರ ಸಂಜೆ 4.00 ಗಂಟೆಗೆ ಬೊರಿವಲಿ ಪಶ್ಚಿಮದ ಚಿಕ್ಕುವಾಡಿ ಅಲ್ಲಿನ ಜೋಗರ್ಸ್ ಪಾರ್ಕ್‍ನಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಇವರಿಂದ ಕಟೀಲು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನವನ್ನು ಆಯೋಜಿಸಿದೆ.

Yakshagana-1

Yakshagana-2
ಇದೇ ಸಂದರ್ಭದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಿದ್ದು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಟೀಲು ಇದರ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ಅವರು ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿsಗಳಾಗಿ ಸಂಸದ ಗೋಪಾಲ ಸಿ.ಶೆಟ್ಟಿ ಮತ್ತು ಗೌರವ ಅತಿಥಿsಯಾಗಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮೂಲ್ಕಿ ಇದರ ಅಧ್ಯಕ್ಷ ಜಯ ಸಿ.ಸುವರ್ಣ ಹಾಗೂ ವಿಶೇಷ ಆಮಂತ್ರಿತರಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಅಂಚನ್, ಅಸೋಸಿಯೇಶನ್‍ನ ಬೊರಿವಲಿ ದಹಿಸರ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಜಿ.ಎಂ.ಕೋಟ್ಯಾನ್, ಸೋನಿ ಸ್ಟೀಲ್ ಆ್ಯಂಡ್ ಅಪ್ಲಾಯೆನ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಪಾಂಡುರಂಗ ಎಸ್.ಶೆಟ್ಟಿ, ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಗೌರವಾಧ್ಯಕ್ಷ ವಿರಾರ್ ಶಂಕರ ಶೆಟ್ಟಿ, ಸೀಎಕ್ಸ್ ಕನ್ಸಲ್‍ಟೆಟ್‍ನ ನ್ಯಾ| ರತ್ನಾಕರ ಎಸ್.ಪೂಜಾರಿ, ಚಲನಚಿತ್ರ ನಟ ರಾಜ್‍ಶೇಖರ್ ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ದಾಮೋದರ ಸಿ.ಕುಂದರ್, ಭಾಸ್ಕರ ಎಂ.ಸಾಲ್ಯಾನ್, ಗಂಗಾಧರ ಜೆ.ಪೂಜಾರಿ, ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ, ನ್ಯಾ| ರವಿ ಕೋಟ್ಯಾನ್, ಚಾರ್‍ಕೋಪ್ ಕನ್ನಡ ಸಂಘದ ಸ್ಥಾಪಕ ಸದಸ್ಯ ಎಂ.ಎಸ್.ರಾವ್, ಪೆÇ್ರಮೊಟರ್ಸ್ ಆ್ಯಂಡ್ ಡೆವಲಪರ್ಸ್‍ನ ಮೋಹನ್ ಆರ್.ಕೋಟ್ಯಾನ್ ಮತ್ತಿತರರು ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕರು ಹಾಗೂ ಫ್ರ್ರೆಂಡ್ಸ್ ಅಸೋಸಿಯೇಶನ್‍ನ ಸಂಚಾಲಕರುಗಳಾದ ಶಿವರಾಮ ಕೆ.ಸಾಲ್ಯಾನ್, ರಜಿತ್ ಸುವರ್ಣ, ಪ್ರೇಮನಾಥ ಕೋಟ್ಯಾನ್, ರವಿರಾಜ್ ಕಲ್ಯಾಣ್ಫುರ್ ತಿಳಿಸದ್ದಾರೆ.

By suddi9

Leave a Reply

Your email address will not be published. Required fields are marked *