ಸುದ್ದಿ9ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಎಂಟನೆಯ ದಿನದ ಪಾದಾಯಾತ್ರೆಗೆ ಮಂಗಳವಾರ ಬೆಳಿಗ್ಗೆ ಕಕ್ಯಬೀಡುವಿನ ಪಂಚದುರ್ಗಪರಮೇಶ್ವರೀ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ವಂದೆ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ತೆಂಕಕಜೆಕಾರು, ಬಡಗಕಜೆಕಾರು, ಪುಂಜಾಲಕಟ್ಟೆ, ಇರ್ವತ್ತೂರು, ಪಿಲಾತಬೆಟ್ಟು, ಮೂಡುಪಡುಕೋಡಿ ಇರ್ವತ್ತೂರು ಗ್ರಾಮಗಳಲ್ಲಿ ಸಂಚರಿಸಿತು.
ಎಂಟನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಕ್ ಉಳೇಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ,ಪ್ರಮುಖರಾದ ದೇವದಾಸ್ ಶೆಟ್ಟಿ, ರಾಮದಾಸ್ ಬಂಟ್ವಾಳ, ಪರುಷ ಸಾಲ್ಯಾನ್ ನೆತ್ತರಕೆರೆ, ಚರಣ್ ಜುಮಾದಿಗುಡ್ಡೆ, ಪ್ರಥ್ವಿರಾಜ್, ಪದ್ಮನಾಭ ರೈ, ಲಲಿತೇಶ ಶೆಟ್ಟಿ, ಪ್ರಕಾಶ್ ಕರ್ಲ, ರೋಹಿತಾಶ್ವ, ಯಶೋಧರ, ವಸಂತ ಸಾಲ್ಯಾನ್, ಡೋಬಯ್ಯ ಮತ್ತಿತರರು ಹಾಜರಿದ್ದರು.

‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಎಂಟನೆಯ ದಿನದ ಪಾದಾಯಾತ್ರೆ ಆರಂಭಕ್ಕೆ ಮುನ್ನ ಕಕ್ಯಪದವು ಶ್ರೀ ಪಂಚ ದುರ್ಗಪರಮೇಶ್ವರೀ ದೇವಸ್ಥಾನದಲ್ಲಿ ಪಾದಾಯಾತ್ರೆಯ ರುವಾರಿ ರಾಜೇಶ್ ನಾಯಕ್ ಉಳಿಪಾಡಿಗುತ್ತು ಹಿರಿಯ ಮಹಿಳೆಯೊಬ್ಬರ ಆಶೀವರ್ಾದ ಪಡೆದರು

bjp

By suddi9

Leave a Reply

Your email address will not be published. Required fields are marked *