ಬಂಟ್ವಾಳ : ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಬ್ರಹ್ಮರಕೊಟ್ಲುವಿನ ದರಿಬಾಗಿಲು ಉಮನಗುಡ್ಡೆ ನೂತನ ಕಾಂಕ್ರಿಟೀಕೃತ ರಸ್ತೆಯನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಕಳ್ಳಿಗೆ ಪಂ.ಅಧ್ಯಕ್ಷೆ ರತ್ನಾ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಭೂನ್ಯಾಯ ಮಂಡಳಿ ಸದಸ್ಯ ದಿವಾಕರ ಪಂಬದಬೆಟ್ಟು, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಜಗ ದೀಶ್ ಕುಂದರ್, ಬಂ.ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಮಾಜಿ ಸದಸ್ಯ ಪದ್ಮನಾಭ ರಾವ್ ಕನಪಾಡಿ, ಪಂ.ಸದಸ್ಯ ಮಧುಸೂದನ್ ಶೆಣೈ, ಇಂಜಿನಿಯರುಗಳಾದ ನರೇಂದ್ರ ಬಾಬು, ಕೆ.ಪಿ.ಗಿರೀಶ್, ಕೃಷ್ಣ, ಭೂ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ
ಪ್ರಕಾಶ್ ಬಿ.ಶೆಟ್ಟಿ, ಗುತ್ತಿಗೆದಾರ ದಿನೇಶ್ ರೈ ಕುಪ್ಪಿಲ, ಪ್ರಮುಖರಾದ ಸೇಸಪ್ಪ ಕೋಟ್ಯಾನ್ , ಶಿವಪ್ಪ ಪೂಜಾರಿ ಪಲ್ಲ, ಜಫರಿನ್ ರೋಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

