ಪಂಚಮ ಪರ್ಯಾಯಕ್ಕೆ ಮಹಾರಾಷ್ಟ್ರದ ಭಕ್ತರನ್ನು ಆಹ್ವಾನಿಸಿದ ಪೇಜಾವರಶ್ರೀ
ಮುಂಬಯಿ, ಜ.06: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿನ ಶ್ರೀ ಪೇಜಾವರ ಮಠದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶಿಲಾಮಯ ಮಂದಿರದಲ್ಲಿ ಇಂದಿಲ್ಲಿ ಬುಧವಾರ ಪೂರ್ವಾಹ್ನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಕೃಷ್ಣ ದೇವರಿಗೆ ದೃಢ ಕಲಶಾರಾಧನೆ ನೆರವೇರಿಸಿದರು.

ಶಿಲಾಮಯ ಮಂದಿರದಲ್ಲಿ ಪೇಜಾವರಶ್ರೀಗಳು ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ದೇವರಿಗೆ ಪೂಜೆ ನಡೆಸಿ ದೃಢ ಕಲಶ ನೆರವೇರಿಸಿ ಉಪಸ್ಥಿತ ಭಕ್ತರಿಗೆ ಫಲಮಂತ್ರಾಕ್ಷೆಯನ್ನು ನೀಡಿ ಆಶೀರ್ವಚಿಸಿದರು. ಇದೇ ಶುಭಾವಸರದಲ್ಲಿ ಐತಿಹಾಸಿಕ ಪಂಚಮ ಪರ್ಯಾಯಕ್ಕೆ ಸಿದ್ಧರಾಗಿರುವ ಪೇಜಾವರಶ್ರೀಗಳನ್ನು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ವಿಶ್ವಸ್ಥ ಕೆ.ವಿ ಮೂರ್ತಿ ಯೆರ್ಕಾಡಿತಾಯ, ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಕಾರ್ಯನಿರತ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಆಡಳಿತಾಧಿಕಾರಿ ರೆಂಜಾಳ ರಾಮದಾಸ ಉಪಾಧ್ಯಾಯ ಮತ್ತು ಶ್ರೀಹರಿ ಭಟ್, ನಿರಂಜನ್ ಗೋಗ್ಟೆ ಸಾಂಪ್ರದಾಯಿಕವಾಗಿ ಗೌರವಿಸಿ ಶುಭಾರೈಸಿದರು.

Pejawar Mutt Druhdha Kalasha-1

Pejawar Mutt Druhdha Kalasha-2

Pejawar Mutt Druhdha Kalasha-3

Pejawar Mutt Druhdha Kalasha-5

Pejawar Mutt Druhdha Kalasha-8

Pejawar Mutt Druhdha Kalasha-11

Pejawar Mutt Druhdha Kalasha-A1

Pejawar Mutt Druhdha Kalasha-B5

Pejawar Mutt Druhdha Kalasha-B7

Pejawar Mutt Druhdha Kalasha-B8

 

ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಬಿ.ಆರ್ ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ರಾಮ ವಿಠಲ ಕಲ್ಲೂರಾಯ ಮತ್ತಿತರ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಕೆ.ಕೃಷ್ಣರಾಜ ತಂತ್ರಿ, ಶೇಖರ್ ಸಾಲ್ಯಾನ್ ಸಂತಾಕ್ರೂಜ್, ಡಾ| ಎಂ.ಎಸ್.ಆಳ್ವ, ವಿಕ್ರಾಂತ್ ಉರ್ವಾಳ್, ಶಿವರಾಮ ಶೆಟ್ಟಿ, ಹರಿ ಭಟ್ ಮುಂಡ್ಕೂರು, ಬಿ.ಆರ್ ರಾವ್ ಕಲೀನಾ, ಶಿವರಾಮ ಜಿ.ಶೆಟ್ಟಿ ವಾಶಿ, ಕೃಷ್ಣ ವೈ.ಆಚಾರ್ಯ, ಪುಂಡರಿಕಾಕ್ಷ ಉಡುಪ, ಶ್ರೀನಿವಾಸ ಭಟ್ ಪರೇಲ್, ಜಯರಾಮ ಶೆಟ್ಟಿ, ಆರ್.ಜಿ ಕುಲಕರ್ಣಿ, ಜಗನ್ನಾಥ ರಾವ್, ನರೇಂದ್ರ ಶೆಟ್ಟಿ ಹಾಗೂ ಪುರೋಹಿತÀರನೇಕರು ಉಪಸ್ಥಿತರಿದ್ದು, ಸಮಸ್ತ ಭಕ್ತಾಭಿಮಾನಿಗಳಿಗೆ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಆಶೀರ್ವಚಿಸಿದರು. ನಂತರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಸರ್ವಜ್ಞ ಪೀಠಾರೋಹಣದ ಐತಿಹಾಸಿಕ ಪಂಚಮ ಪರ್ಯಾಯಕ್ಕೆ ಮಹಾರಾಷ್ಟ್ರದಾತ್ಯಂದ ಸರ್ವ ಭಕ್ತಾಭಿಮಾನಿಗಳನ್ನು ಉಡುಪಿಗೆ ಆಹ್ವಾನಿಸಿದರು. ರಾಮದಾಸ್ ಕೋಟ್ಯಾನ್ ಬಳಗದಿಂದ ಚೆಂಡವಾದ ಹಾಗೂ ಮಹಿಳೆಯರಿಂದ ಭಜನೆ ಕಾರ್ಯಕ್ರಮ ನೇರವೇರಿತು.

By suddi9

Leave a Reply

Your email address will not be published. Required fields are marked *