ಮಕ್ಕಳ ಸಂವರ್ಧಿಕರಣದಿಂದ ಸ್ವಸ್ಥ ಸಮಾಜ ಸಾಧ್ಯ: ಮೇಡಂ ಪಿಂಟೋ
ಮುಂಬಯಿ, ಜ.07: ವಿಶ್ವದೆಲ್ಲೆಡೆ ಅಶಾಂತಿ, ಅತೃಪ್ತಿ ಮತ್ತು ಅಸಮಾಧಾನ ತಾಂಡವವಾಡುತ್ತಿರುವ ಪ್ರಸಕ್ತ ದಿನಗಳಲ್ಲಿ ಇವೆಲ್ಲಕ್ಕೂ ಉತ್ತರಿಸಲು ನಾವು ಮಕ್ಕಳಲ್ಲಿ ಸಂಸ್ಕಾರಯುತ ಬದುಕನ್ನು ರೂಪಿಸುವ ಅಗತ್ಯವಿ ದೆ. ಅವರಲ್ಲಿನ ಪ್ರತಿಭೆಗಳನ್ನು ಪೆÇ್ರೀತ್ಸಾಹಿಸಿ ಬೆಳೆಸಿದಾಗ ಮಾತ್ರ ನಾವು ಜಾಗತೀಕರಣವನ್ನು ಎದುರಿಸ ಬಹುದು. ಜಾಗತೀಕರಣದಿಂದ ಸಮಾನತೆಯನ್ನು ರೂಪಿಸಬಹುದು. ಇವೆಲ್ಲಕ್ಕೂ ಸರ್ವ ರಾಷ್ಟ್ರಗಳ ಸಂಬಂಧಗಳೂ ಅವಶ್ಯವಾಗಿದೆ. ವಿಶ್ವದ ಸರ್ವ ಜನಾಂಗ, ವರ್ಗದ ಜನತೆಯ ಭಾವನೆಗಳನ್ನು ಬೆಸೆಯುವ, ಸರ್ವರನ್ನೂ ಸಮಾನವಾಗಿ ಕಂಡು ಗೌರವಿಸಿದಾಗಲೇ ಸಮಾನತೆ ಸೃಷ್ಠಿಯಾಗ ಬಲ್ಲದು. ಮಕ್ಕಳ ಸಂವರ್ಧಿಕರಣದಿಂದ ಆರೋಗ್ಯದಾಯಕ ಸಮಾಜ ನಿರ್ಮಾಣ ಸಾಧ್ಯವಾಗಿದೆ. ಮಕ್ಕಳ ವಿಕಾಸನಾ ಶಕ್ತಿ ಮೇಲೆ ಜನ ಸಮುದಾಯ ಬೆಳೆದು ನಿಂತಾಗ ಸರ್ವರಿಗೂ ಸಮಬಾಳು ಪ್ರಾಪ್ತಿಸುವುದು ಎಂದು ರಾಯನ್’ಸ್ ಸಂಸ್ಥೆಯ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ತಿಳಿಸಿದರು.
ಜಾಗತಿಕ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಯುವ ಸಾಂಸ್ಕøತಿಕ ರಾಯಭಾರಿಗಳ ಮೂಲಕ ಸಂಸ್ಕøತಿ ಮತ್ತು ಮೌಲ್ಯಗಳನ್ನು ಬೆರೆಸುವ ಉದ್ದೇಶದಿಂದ ಇಂದಿಲ್ಲಿ ಗುರುವಾರ ಬೆಳಿಗ್ಗೆ ಉಪನಗರ ಅಂಧೇರಿ ಪಶ್ಚಿಮದ ರಾಯನ್ ಗ್ಲೋಬಲ್ ಸ್ಕೂಲ್‍ನಲ್ಲಿ ರಾಯನ್’ಸ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಯು ಹಮ್ಮಿಕೊಂಡಿರುವ ನಾಲ್ಕು ದಿನಗಳ ಹದಿನಾಲ್ಕನೇ ಮಕ್ಕಳ ಅಂತರಾಷ್ಟ್ರೀಯ ಪ್ರದರ್ಶನ ಕಲೆ ಉತ್ಸವಕ್ಕೆ ಸಾಂಕೇತಿಕವಾಗಿ ಚಾಲನೆಯನ್ನೀಡಿ ಉಪಸ್ಥಿತ ಎಲ್ಲಾ ರಾಷ್ಟ್ರಗಳ ವಿದ್ಯಾಥಿರ್ಗಳನ್ನುದ್ದೇಶಿಸಿ ಮೇಡಂ ಪಿಂಟೋ ಮಾತನಾಡಿದರು.
ವಿಶ್ವದ ಹತ್ತಾರು ರಾಷ್ಟ್ರಗಳ ಸಾಂಸ್ಕøತಿಕ ಮುಖವನ್ನು ಕಂಡುಕೊಳ್ಳಲು ಈ ಬಾರಿ ಸುಮಾರು 12,000 ಮಕ್ಕ ಳನ್ನು ಬರಮಾಡಿಕೊಂಡು ಈ ಉತ್ಸವ ನಡೆಸಲಾಗುತ್ತಿದೆ. ಇದೊಂದು ಅದ್ಭುತ ಸಾಧನೆ ಮತ್ತು ಭಾರತ ರಾಷ್ಟ್ರಕ್ಕೆ ಹಿರಿಮೆ ಆಗಿದೆ. ಬಾಂಗ್ಲಾದೇಶ, ಡೆನ್ಮಾರ್ಕ್, ಭಾರತ, ಲಿಥುವಾನಿಯ, ಜರ್ಮನಿ, ಇರಾನ್, ಲ್ಯಾಟ್ವೀಯಾ, ನೈಝೇರಿಯಾ, ನೇಪಾಳ, ಪಾಕಿಸ್ತಾನ, ರೊಮೇನಿಯಾ, ರಷ್ಯಾ, ಸಿಂಗಾಪುರ, ಸೌತ್ ಕೊರೇಯಾ, ಶ್ರೀಲಂಕಾ, ಟರ್ಕಿ, ಜಾಂಬಿಯಾ ಮತ್ತು ಜಿಂಬಾವ್ವೆ ಮತ್ತಿತರ ವಿವಿಧ ರಾಷ್ಟ್ರಗಳ ಮಕ್ಕಳು ಈ ಜಾಗತಿಕ ವೇದಿಕೆಯಲ್ಲಿ ಒಗ್ಗೂಡಿದ್ದು, ಅವರೆಲ್ಲರೂ ತಮ್ಮ ಭವಿಷ್ಯದ ಕುರಿತು ತಾವು ಹೊಂದಿರುವ ಕನಸುಗಳು ಮತ್ತು ಗುರಿಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ವಿವಿಧ ರಾಷ್ಟ್ರಗಳ ಮಕ್ಕಳು `ವರ್ಲ್ಡ್ ವಿಲೇಜ್’ ಸ್ಟಾಲ್‍ಗಳ ಮುಖೇನ ತಮ್ಮ ಪುರಾತನ ಸಂಸ್ಕೃತಿ, ಪರಂಪರೆಗಳÀನ್ನು ಪ್ರದರ್ಶಿಸಲಿದ್ದಾರೆ. ಮುಂಬಯಿ ಸಯಾನ್ ಕಿಂಗ್‍ಸರ್ಕಲ್ ಅಲ್ಲಿನ ಶ್ರೀ ಷಣ್ಮುಖಾನಂದ ಚಂದ್ರಶೇಖರ ಸರಸ್ವತಿ ಸಭಾಗೃಹದಲ್ಲಿ ನಾಲ್ಕು ದಿನಗಳಲ್ಲಿ ವಿಜೃಂಭನೆಯಿಂದ ನಡೆಸಲ್ಪಡುವ ಉತ್ಸವವನ್ನು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಚೆನ್ನಮಣೆನಿ ವಿದ್ಯಾಸಾಗರ್ ರಾವ್ ಉದ್ಘಾಟಿಸಲಿದ್ದಾರೆ ಎಂದು ರಾಯನ್’ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ರಾಯನ್ ಪಿಂಟೋ ತಿಳಿಸಿದರು.
ರಾಯನ್’ಸ್ ಸಂಸ್ಥೆಯ ಸಂಸ್ಥಾಪಕ ಡಾ| ಆಗಸ್ಟಿನ್ ಎಫ್.ಪಿಂಟೋ ಅವರ ಸಂದೇಶವಾಚನದೊಂದಿಗೆ ಉತ್ಸವ ಆರಂಭಿಸಲಾಗಿದ್ದು ರಾಯನ್ ಪಿಂಟೋ ಬೈಬಲ್ ಪಠನಗೈದು ಉತ್ಸವದ ಯಶಸ್ಸಿಗೆ ಪ್ರಾರ್ಥನೆಗೈದರು. ಕು| ಯಶ್ವಿ ಖನ್ನಾ ಸ್ವಾಗತಿಸಿದರು. ಕು| ಎಸ್. ದೀಪ್ನಾ (ಹಿಂದಿ), ಕು| ಖುಷಿಯನ್ (ಮರಾಠಿ) ಮತ್ತು ಕು| ಅನಯ ಗ್ರೇಸ್ (ಫ್ರೆಂಚ್) ಭಾಷೆಯಲ್ಲಿ ಸುಖಾಗಮನ ಬಯಸಿದರು. ರಾಯನ್ ಗ್ಲೋಬಲ್ ಶಾಲಾ ವಿದ್ಯಾಥಿರ್üಗಳು ಪ್ರಾರ್ಥನಾ ಮತ್ತು ಸ್ವಾಗತ ನೃತ್ಯಗೈದರು. ಸಂಸ್ಥೆಯ ಸ್ನೇಹಲ್ ಪಿಂಟೋ, ಸೋನಲ್ ಪಿಂಟೋ ಅವರು ಪಾಲ್ಗೊಂಡಿದ್ದ ವಿವಿಧ ರಾಷ್ಟ್ರಗಳ ಮಕ್ಕಳ ತಂಡಕ್ಕೆ ಭಾರತೀಯ ಸಾಂಪ್ರದಾಯದಂತೆ ಗೌರವಿಸಿದರು. ಉತ್ಸವ ಸಂಘಟಕ ಉತ್ಕರ್ಷ್ ಮಾರ್ವಾ ಮತ್ತು ಶಿಕ್ಷಕಿ ಮಾರ್ಗರೇಟ್ ಕುವೆಲೋ ಕಾರ್ಯಕ್ರಮ ನಿರೂಪಿಸಿದರು. ಸಿಒಒ ನೇತಿ ಶ್ರೀನಿವಾಸನ್ ಅಭಾರ ಮನ್ನಿಸಿದರು.
ಬಳಿಕ ವಿವಿಧ ರಾಷ್ಟ್ರಗಳಿಂದ ಆಗಮಿಸಿದ್ದ ಮಕ್ಕಳು ತಮ್ಮತಮ್ಮ ಸಂಸ್ಕೃತಿ ಸಾರುವ ವೈವಿಧ್ಯತೆಯ ವಸ್ತ್ರಾಭರ ಣ, ಉಡುಗೆ ತೊಡುಗೆಗಳನ್ನುಟ್ಟು ಯಮುನಾನಗರ ಲೋಕಂಡ್‍ವಾಲಾ ಸ್ಥಾನೀಯ ಪೇಟೆಯಲ್ಲಿ ಮೆರವಣಿಗೆ ಯಲ್ಲಿ ಸಾಗುತ್ತಾ ಮಕ್ಕಳೋತ್ಸವಕ್ಕೆ ಮೆರುಗು ನೀಡಿದರು.

















\





