ಹಿಂದೂ ಸಂಸ್ಕøತಿಯ ದಮನಕ್ಕೆ ಆಡಳಿತಾರೂಢರಿಂದ ಕಸರತ್ತು-ಡಾ|ಕಲ್ಲಡ್ಕ ಪ್ರಭಕರ್ ಭಟ್
ಕೈಕಂಬ: ಹಿಂದೂ ಸಂಸ್ಕøತಿಗೆ ನಾವು ಕಟ್ಟು ನಿಟ್ಟಾಗಿ ಬದ್ಧರಾಗಿದ್ದಾಗ ಅಂಜದೆ ಅಳುಕದೆ ನಾವು ಹಿಂದುಗಳೆನ್ನಲು ಹೆದರಬೇಕಿಲ್ಲ. ಹಿಂದೂ ಸಂಸ್ಕøತಿಯ ದಮನಕ್ಕೆ ನಿರಂತರವಾಗಿ ಸಂಚು ಹೂಡಲಾಗುತ್ತಿದ್ದು ಅದಕ್ಕಾಗಿ ರಾಜಕೀಯ ಆಡಳಿತಾಧಿಕಾರದ ದುರುಪಯೋಗವಾಗುತ್ತಿದೆ. ಸಾಮೂಹಿಕ ಪಾಲ್ಗೊಳ್ಳುವಿಕೆಯೊಂದಿಗೆ ನಮ್ಮ ನಾಡಿನ ಸಂಸ್ಕಾರಗಳನ್ನು ಪಾಲಿಸಿ ಮೊದಲು ನಾವು ಮಾದರಿಯಾಗುವ ಮೂಲಕ ಇತರರಿಗೂ ತಿಳಿ ಹೇಳುವ ಮೂಲಕ ಅವರಲ್ಲೂ ಧರ್ಮರಕ್ಷಣೆಯ ಜಾಗೃತಿಯನ್ನು ಮೂಡಿಸಬೇಕು. ಭಜನಾ ಸಂಕೀರ್ತನೆ ಇದಕ್ಕೆ ಪ್ರಬಲ ಮತ್ತು ಪ್ರಖರ ಮಾಧ್ಯಮ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿಣೀ ಸದಸ್ಯ ಡಾ|ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಅವರು ಪೊಳಲಿಗೆ ಸಮೀಪದ ಮಣಿಕಂಠಪುರದ ಶ್ರೀಮಣಿಕಂಠ ಭಜನಾ ಮಂದಿರದ ಹತ್ತನೇ ವರ್ಷದ ಭಜನೆ ಸಂಕೀರ್ತನೆ ದಶಮಾನೋತ್ಸವ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ಸ್ವಾಮಿವಿವೇಕಾ ಚೈತನ್ಯಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪರಿಶುದ್ಧ ಮನಸ್ಸಿನ ಭಜನೆಯಿಂದ ಮನಸ್ಸು ಸಂಪ್ರೀತಗೊಳ್ಳುತ್ತದೆ. ಮತ್ತು ಭಗವಂತನ ಒಲಿಸಿಕೊಳ್ಳುವ ಸುಲಭದ ಮಾಧ್ಯಮ ಮನೆಗಳಲ್ಲಿ ಈ ಸಂಸ್ಕಾರವನ್ನು ಅನುಸರಿಸಿದಾಗ ಸುಸಂಸ್ಕøತ ಹಾದಿಯಲ್ಲಿ ಸಾಗಲು ಮಕ್ಕಳು ನಮ್ಮನ್ನು ಅನುಕರಿಸುತ್ತಾರೆ. ಎಂದರು.
ಡಾ| ಕಮಲಾ ಪ್ರಭಕರ್ ಭಟ್, ಮಾದುಕೋಡಿ ರೇಖೀ ತಜ್ಞ ವಿಜಯ ಸುವರ್ಣ ಪೊಳಲಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಅರ್ಚಕ ಕೆ.ರಾಮ್ ಭಟ್, ಉದ್ಯಮಿ ಕೃಷ್ಣ ಪೂಜಾರಿ ಬೆಳ್ಳೂರು, ಮಣಿಕಂಠ ಸೇವಾ ಸಮಿತಿಯ ಅಧ್ಯಕ್ಷ ಮಹಾಬಲ ಸುವರ್ಣ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ಧರು.
ವಾಮನ ಪೂಜಾರಿ ಮಣಿಕಂಠಪುರ ಸ್ವಾಗತಿಸಿ , ಜನಾರ್ದನ ಅಮ್ಮುಂಜೆ ಕಾರ್ಯ್ಕರಮ ನಿರೂಪಿಸಿದರು.






