ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಸದ್ಗುರು ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಟ್ರಸ್ಟಿನ ಭಜನಾ ಮಂದಿರದಲ್ಲಿ ಜ.6ರಂದು ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮತ್ತು ಪಲ್ಲಕಿ ಉತ್ಸವ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 6.30ಕ್ಕೆ ಗಣಪತಿ ಹವನ ಮತ್ತು 8.30ರಿಂದ 10.30ರತನಕ ಭಗವಾನ್ ಶ್ರೀ ನಿತ್ಯಾನಂದ ಮತ್ತು ಶ್ರೀ ಗೋವಿಂದ ಸ್ವಾಮೀಜಿಯವರ ಪಂಚಲೋಹ ವಿಗ್ರಹಕ್ಕೆ ಭಕ್ತರು ಸ್ವತಃ ಸೀಯಾಳ ಅಭಿಷೇಕ ಮಾಡಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ 6ಗಂಟೆಗೆ ಆಕರ್ಷಕ ಪಲ್ಲಕಿ ಉತ್ಸವ ಮೆರವಣಿಗೆ ನಡೆದು ರಾತ್ರಿ ಇಲ್ಲಿನ ನೇತ್ರಾವತಿ ನದಿಯಲ್ಲಿ ದೇವರ ‘ಅವಭೃತೋತ್ಸವ’ ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಬಿ.ಯೋಗೀಶ ಸಪಲ್ಯ ತಿಳಿಸಿದ್ದಾರೆ.
