ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಲಭವನ ಸೊಸೈಟಿ ಹಾಗೂ ತಾಲೂಕು ಬಾಲಭವನ ಸಮಿತಿ ಇದರ ಸಹಯೋಗದಲ್ಲಿ ತಾಲೂಕಿನ ಮಕ್ಕಳಿಗಾಗಿ ಕಲಾ ಶ್ರೀ ಆಯ್ಕೆ ಶಿಬಿರ ಗುರುವಾರ ಬಿ.ಸಿ.ರೋಡಿನಲ್ಲಿ ನಡೆಯಿತು.
ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. . ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಲಾಖೆ ಇಂತಹಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮಕ್ಕಳು ಸ್ಪರ್ಧಾಮನೋಭಾವದಿಂದ ಭಾಗವಹಿಸುವ ಮೂಲಕ ತಮ್ಮಲ್ಲಿನ ಕಲಾಪ್ರೌಢಿಮೆಯನ್ನು ವಿಸ್ತಾರಗೊಳಿಸಬೇಕೆಂದು ಕರೆ ನೀಡಿದರು. ಸಾಂಸ್ಕ್ರತಿಕ ವಾತಾವರಣ ದಿಂದ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯವಿದ್ದು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ ಮಾತನಾಡಿ, ಅವಕಾಶದ ಕೊರತೆಯಿಂದ ಹಲವಾರು ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ. ಇಂತಹ ಪ್ರತಿಭೆಗಳನ್ನು ಗುರುತಿಸುವಿಕೆಗೆ ಈ ಆಯ್ಕೆ ಶಿಬಿರ ಉತ್ತಮ ವೇದಿಕೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ತೀರ್ಪುಗಾರರಾದ ಬಿ.ರಾಮಚಂದ್ರ ರಾವ್, ಮೌನೇಶ ವಿಶ್ವಕರ್ಮ, ಯೋಗೀಶ ಆಳದಂಗಡಿ, ಗೋಪಾಲ ಅಂಚನ್, ಚೆನ್ನಕೇಶವ, ಜಯಂತಿ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ಸಿಡಿಪಿಓ ಸುಧಾ ಜೋಷಿ ಸ್ವಾಗತಿಸಿದರು. ಬಂಟ್ವಾಳ ಸಿಡಿಪಿಓ ಮಲ್ಲಿಕಾ ವಂದಿಸಿದರು. ಮೇಲ್ವ್ವಿಚಾರಕಿ ಪುಷ್ಪ¯ತಾ ಕಾರ್ಯಕ್ರಮ ನಿರೂಪಿಸಿದರು. ಸ್ತ್ರೀ ಶಕ್ತಿ ಭವನ, ಇಲ್ಲಿನ ಆಶ್ರಮ ಶಾಲೆ ಹಾಗೂ ವಿಕಾಸ ಸೌಧದಲ್ಲಿ ವಿವಿಧ ಸ್ಪರ್ಧಾಕಾರ್ಯಕ್ರಮಗಳು ನಡೆಯಿತು.
