ಮೂಡುಬಿದರೆ: ಜೈನ ಪದವಿಪೂರ್ವ ಕಾಲೇಜಿನ ಪಿ.ಯು.ಸಿ ವಿದ್ಯಾರ್ಥಿನಿ ಐಶ್ವರ್ಯ ವೈ ಜೈನ್ ಮಧ್ಯಪ್ರದೇಶದ ಸೋನಾಗಿರಿಯಲ್ಲಿ ಜರುಗಿದ ಸಮಾರಂಭದಲ್ಲಿ ಜ್ಞಾನಸಾಗರ ಮುನಿಮಹಾರಾಜರಿಂದ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ್ದಾರೆ.
ಮೂಡುಬಿದರೆ ಡಿ.ಜೆ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಶಿಕಾಂತ್ ವೈ ಹಾಗೂ ಶಿರ್ತಾಡಿ ಜವಹರಲಾಲ್ ನೆಹರೂ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಪದ್ಮಾಕ್ಷಿ ಎನ್. ಅವರ ಪುತ್ರಿ.
