ಬಂಟ್ವಾಳ: ಯುವಜನತೆ ಬರವಣಿಗೆ ಮತ್ತು ರಂಗಕಲೆ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿದಾಗ ಇಂತಹ ಚಟುವಟಿಕೆಗಳಿಗೆ ತುಳು ಸಾಹಿತ್ಯ ಅಕಾಡೆಮಿ ಎಲ್ಲಾ ರೀತಿಯ ನೆರವು ನೀಡುತ್ತದೆ ಎಂದು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಹೇಳಿದ್ದಾರೆ.
ತಾಲ್ಲೂಕಿನ ಯುವವಾಹಿನಿ ಘಟಕ ಮತ್ತು ವಿಶುಕುಮಾರ್ ದತ್ತಿ ನಿಧಿ ಸಂಚಾಲನಾ ಸಮಿತಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಿ.ಸಿ.ರೋಡ್‍ನಲ್ಲಿ ಸೋಮವಾರ ಏರ್ಪಡಿಸಿದ್ದ ‘ಸೃಜನಶೀಲ ಬರವಣಿಗೆ ಮತ್ತು ರಂಗಭೂಮಿ’ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯುವವಾಹಿನಿ ಕೇಂದ್ರ ಸಮಿತಿ ಅದ್ಯಕ್ಷ ಸಂತೋಷ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗೋಪಾಲ ಅಂಚನ್ ಸೃಜನಶೀಲ ಬರವಣಿಗೆ ಮತ್ತು ರಂಗಕರ್ಮಿ ಜಗನ್ ಪವರ್ ಬೇಕಲ್ ರಂಗಭೂಮಿ ಮತ್ತು ಯುವಜನತೆ ಬಗ್ಗೆ ತರಬೇತಿ ನೀಡಿದರು. ಕಾರ್ಯಾಗಾರದ ಸಂಚಾಲಕ ಟಿ.ಶಂಕರ ಸುವರ್ಣ ಪ್ರಾಸ್ತಾವಿಕ ಮಾತನಾಡಿದರು.
ತಾಲ್ಲೂಕು ಘಟಕ ಅದ್ಯಕ್ಷ ರಾಜೇಶ್ ಸುವರ್ಣ ಸ್ವಾಗತಿಸಿ, ಸಂಚಾಲನಾ ಸಮಿತಿ ಸಂಚಾಲಕ ಕಿಶೋರ್ ಕೆ.ಬಿಜೈ ವಂದಿಸಿದರು. ಮಾಜಿ ಅಧ್ಯಕ್ಷ ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
