ಬಂಟ್ವಾಳ: ತಾಲೂಕಿನ ಬುಡೋಳಿ ಗ್ರಾಮದ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದಲ್ಲಿ ಶ್ರೀ ಗುರು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೂತನ ಗುಡಿಗಳ ನಿರ್ಮಾ ಣಕ್ಕೆ ಶಿಲಾನ್ಯಾಸ ಸಮಾರಂಭವು ಮೆ.12ರಂದು ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ.
ಮಾಣಿಬೆಟ್ಟು ಎಂಬ ಪುಣ್ಯಭೂಮಿಯಲ್ಲಿರುವ ಸುಮಾರು 400 ವರ್ಷಗಳ ಪುರಾತನ ಐತಿಹ್ಯವಿರುವ ಗುರು ಪರಂಪರೆಯ ಈ ಕಾರಣಿಕ ಕ್ಷೇತ್ರದಲ್ಲಿ ಶ್ರೀ ದುರ್ಗಾಂಬಿಕಾ ಅಮ್ಮನವರು ನಾಗದೇವರು, ರಕ್ತೇಶ್ವರೀ, ಧೂಮಾವತಿ, ಮೈಷಂದಾಯ, ಕಲ್ಲುರ್ಟಿ ವನರ್ಾರ ಪಂಜುರ್ಲಿ ಸೂಕತ್ತೆರಿ ಮೈಯಂತಿ, ಬೈರವ ಹಾಗೂ ಗುಳಿಗ ಎಂಬ ಪರಿವಾರ ದೈವಗಳೊಡನೆ ನೆಲೆಯಾಗಿದ್ದು ನಂಬಿ ಭಕ್ತರ ಇಷ್ಟಾರ್ಥ ಸಿದ್ಧಿಸುವ ತಾಣವಾಗಿ ಕ್ಷೇತ್ರವೂ ಮೆರೆಯುತ್ತಿದೆ.
ಇದೀಗ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಕ್ಷೇತ್ರದಲ್ಲಿ ಶ್ರೀ ಗುರು ಸಹಿತ ದೈವಗಳನ್ನು ಪ್ರತಿಷ್ಠಾಪಿಸಲು ಸಂಕಲ್ಪಿಸಲಾಗಿದ್ದು ಭಕ್ತಾದಿಗಳ ಸಹಕಾರದೊಂದಿಗೆ, ನೂತನ ಗುಡಿಗಳ ನಿರ್ಮಾಣದೊಂದಿಗೆ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಸವರ್ಾಂಗ ಸುಂದರವಾಗಿ, ಊರಪರವೂರ ಭಕ್ತರ ಆಕರ್ಷಣೀಯ ಆರಾಧನಾ ಕೇಂದ್ರವಾಗಿ ರೂಪಿಸಲು ತೀರ್ಮಾನಿಸಲಾಗಿದೆ. ನೂತನ ಗುಡಿಗಳ ನಿರ್ಮಾಣ ಸಹಿತ ಶ್ರೀ ದೇವಿ ಗರ್ಭಗುಡಿ ನವೀಕರಣಕ್ಕೆ ರೂ.50ಲಕ್ಷ ವೆಚ್ಚದ ಯೋಜನೆ ರೂಪಿಸಲಾಗಿದ್ದು ಇದಕ್ಕಾಗಿ ಜೀಣರ್ೋದ್ಧಾರ ಸಮಿತಿ ಹಾಗೂ ಸೇವಾ ಸಮಿತಿ ಕಾರ್ಯಪೃವೃತ್ತವಾಗಿದೆ.
ನಾಳೆ ಶಿಲಾನ್ಯಾಸ:
ಮೆ.12ರಂದು ಬೆಳಿಗ್ಗೆ 9ರಿಂದ 11ರ ಶುಭಮೂಹೂರ್ತದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ, ದೇವಿ ಆರಾಧಕರಾದ ಶ್ರೀ ಹರೀಶ ನಾಯ್ಕ ಅವರು ಶಿಲಾನ್ಯಾಸ ನೆರವೇರಿಸುವರು. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಗಳು ಆಶ್ರೀರ್ವಚನ ನೀಡಲಿದ್ದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸುವರು. ಗೋಪಾಲಕೃಷ್ಣ ಕುಲಾಲ್ ವಾಂತಿಜಾಲ್ ಧಾರ್ಮಿಕ ಭಾಷಣ ಮಾಡುವರು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕು ಅಧ್ಯಕ್ಷ ಸುದರ್ಶನ್ ಜೈನ್, ಜಿಲ್ಲಾ ಪಂಚಾಯತು ಅಧ್ಯಕ್ಷ ಕೊರಗಪ್ಪ ನಾಯ್ಕ, ನ್ಯಾಯವಾದಿ ರಾಮಚಂದ್ರ ಶೆಟ್ಟಿ ದಂಡೆ, ವಾಸ್ತು ಶಿಲ್ಪಿ ಶಶಿಧರನ್ ಪೆರಿಯ, ಗ್ರಾಮ ಪಂಚಾಯತು ಅಧ್ಯಕ್ಷ ಸಂಜೀವ ಪೂಜಾರಿ, ಗ್ರಾಮ ಪಂಚಾಯತು ಸದಸ್ಯ ದಿನೇಶ್ ಶೆಟ್ಟಿ, ಅಣ್ಣಿ ಶೆಟ್ಟಿ ಬುಡೋಳಿಗುತ್ತು, ಬಾಲಕೃಷ್ಣ ಮಡಿಕೇರಿ, ಬಾಲಕೃಷ್ಣ ನಾಯ್ಕ ಬೆಳ್ಳಾರೆ, ನಾರಾಯಣ ಸುಳ್ಯ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.
