ಬಂಟ್ವಾಳ : ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ 90ನೇ ವಾರ್ಷಿಕ ಮಹಾಸಭೆ ಸಮ್ಮೇಳನವು ಡಿ 13 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದ್ದು, ಈ ಸಮ್ಮೇಳವನ್ನು ಯಶಸ್ವಿಗೊಳಿಸುವಂತೆ ಬಂಟ್ವಾಳ ಝೋನ್ ಎಸ್ಕೆಎಸ್ಎಸ್ಎಫ್ ಕರೆ ನೀಡಿದೆ.
ಈ ಕುರಿತು ಶುಕ್ರವಾರ ಸಂಜೆ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝೋನ್ ಪ್ರಧಾನ ಕಾರ್ಯದರ್ಶಿ ಟಿ.ಎಂ. ಹನೀಫ್ ತಾಳಿಪಡ್ಪು ಅವರು ಜಗತ್ತಿನ ಅತೀ ದೊಡ್ಡ ಪಂಡಿತ ಸಂಘಟನೆಯಾಗಿರುವ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಅಧೀನದಲ್ಲಿ 300 ಲೌಕಿಕ-ಧಾರ್ಮಿಕ ಸಮನ್ವಯ ಕಾಲೇಜುಗಳು, 50ಕ್ಕಿಂತಲೂ ಅಧಿಕ ಅನಾಥಾಲಯಗಳು, ಹಾಗೂ ಇದರ ಅಧೀನದಲ್ಲಿರುವ ಪಠಣ ಸಂಸ್ಥೆಗಳಲ್ಲಿ 2 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿ ಗಳಿದ್ದಾರೆ ಎಂದರು.
ಬಂಟ್ವಾಳ ಝೋನ್ ಎಸ್ಕೆಎಸ್ಎಸ್ಎಫ್ ಕಮಿಟಿಯು 45 ಯುನಿಟ್, 5 ಕ್ಲಸ್ಟರ್ ಹಾಗೂ 35 ಸಾವಿರ ಪ್ರತಿನಿಧಿಗಳನ್ನು ಹೊಂದಿದೆ ಎಂದ ಹನೀಫ್ ಸಮ್ಮೇಳನಕ್ಕೆ ತಾಲೂಕಿನಿಂದ 25 ಉಚಿತ ಬಸ್ಸುಗಳ ಸೇವೆಯಿದ್ದು, ಸುಮಾರು 21 ಸಾವಿರಕ್ಕಿಂತಲೂ ಅಧಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸಮ್ಮೇಳಕ್ಕೆ ತೆರಳುವ ಎಲ್ಲ ವಾಹನಗಳಿಗೆ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಟೋಲ್ ಫ್ರೀ ವ್ಯವಸ್ಥೆ ಮಾಡಲಾಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಝೋನ್ ಅಧ್ಯಕ್ಷ ಕೆ.ಪಿ. ಇಶರ್ಾದ್ ದಾರಿಮಿ, ಕೊಶಾಧಿಕಾರಿ ಎಸ್.ಎಂ. ಬಶೀರ್ ಮಜಲ್, ಸದಸ್ಯ ಎಂ. ಅಲ್ತಾಫ್ ಉಪಸ್ಥಿತರಿದ್ದರು.
