ಬಂಟ್ವಾಳ; ತಾಲೂಕಿನ ಕೆದಿಲ ಗ್ರಾಮದ ಗಡಿಯಾರದ ಸ್ವಾಗತನಗರ ಎಂಬಲ್ಲಿ ಗೋಮಾಳಕ್ಕೆಂದು ಮೀಸಲಿಟ್ಟ ಸರ್ವೆ  ನಂ.115/1ಪಿ1 ರಲ್ಲಿ 14.56 ಎಕ್ರೆ ಜಮೀನಿನಲ್ಲಿ ಸುಮಾರು 3 ರಿಂದ 4 ಎಕ್ರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿದ್ದು, ಇದರಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡಗಳನ್ನು ಮುಂದಿನ 7 ದಿನಗಳ ಒಳಗಾಗಿ ತೆರವು ಗೊಳಿಸದಿದ್ದರೆ, ಬಂಟ್ವಾಳ ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಹಿಂದೂ ಜಾಗರಣಾ ವೇದಿಕೆ ಎಚ್ಚರಿಸಿದೆ.

000ವಿಟ್ಲ ತಾಲೂಕು ಘಟಕದ ಕಾರ್ಯದರ್ಶಿ  ಬ.ಗಣರಾಜ ಭಟ್ ಅವರು ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಕ್ರಮಣ ಗೊಂಡ ಜಮೀನಿನಲ್ಲಿ ಇಕ್ಬಾಲ್ ಎಂಬವರಿಗೆ ಸೇರಿದ ಒಂದು ಕೋಳಿಫಾರಂ ಹಾಗೂ ನಾಲ್ಕರಿಂದ ಐದು ಮನೆಗಳು ಅಕ್ರಮವಾಗಿ ನಿರ್ಮಾಣಗೊಂಡಿದ್ದು, ಜೊತೆಗೆ ಅಕ್ರಮ ಮರಳು ಶೇಖರಣೆಯನ್ನೂ ಇಲ್ಲಿ ಮಾಡಲಾಗಿದೆ ಎಂದು ಆರೋಪಿಸಿದರು.
ಹಿಂ.ಜಾ.ವೇದಿಕೆ ವತಿಯಿಂದ ಕಳೆದ 2012ರಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿ ಸಹಿತ ಸಹಾಯಕ ಕಮೀಷನರ್, ತಹಶೀಲ್ದಾರ್ ಮತ್ತು ಆಗಿನ ಗ್ರಾ.ಪಂ.ಆಡಳಿತಕ್ಕೆ ಹಾಗೂ ಸ್ಥಳೀಯ ಶಾಸಕರಿಗೂ ಮನವಿ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಅಂದಿನ ಜಿಲ್ಲಾಧಿಕಾರಿಯವರು ಇದನ್ನು ಪರಿಶೀಲಿಸಿ, ಸೂಕ್ತಕ್ರಮ ಕೈಗೊಂಡು ದೂರುದಾರರಿಗೆ ಹಿಂಬರವನ್ನು ನೀಡುವಂತೆ ಬಂಟ್ವಾಳ ತಹಶೀಲ್ದಾರರಿಗೆ ಸೂಚಿಸಿದ್ದರು. ಆದರೆ ಎರಡು ವರ್ಷ ಕಳೆದರೂ ಯಾವುದೇ ತಹಶೀಲ್ದಾರರು ಅಥವಾ ಸರ್ವೆ  ಇಲಾಖೆ ಸಹಿತ ಯಾರೊಬ್ಬರೂ ಸ್ಥಳಪರಿಶೀಲನೆ ನಡೆಸಿಲ್ಲ.

ಹಾಗೆಯೇ ಅತಿಕ್ರಮಣದ ಬಗ್ಗೆ ಕಾನೂನು ಕ್ರಮವನ್ನೂ ಕೈಗೊಂಡಿಲ್ಲ ಎಂದು ಭಟ್ ಆರೋಪಿಸಿದರು. ಇದೀಗ ಮತ್ತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಈ ಕುರಿತಂತೆ ಮನವಿಯನ್ನು ಸಲ್ಲಿಸಲಾಗಿದ್ದು, ವಿಧಾನ ಪರಿಷತ್ ಚುನಾವಣೆಯ ನೆಪವೊಡ್ಡಿ ಮತ್ತೆ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸ್ಥಳೀಯ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಅತಿಕ್ರಮಣದ ಹಿಂದೆ ರಾಜಕೀಯ ಪ್ರಭಾವವಿದ್ದು, ಅಧಿಕಾರಿಗಳು ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ವಿಟ್ಲ ತಾ. ಹಿಂ.ಜಾ.ವೇದಿಕೆ ಸಂಚಾಲಕ ರತ್ನಕಾರ ಶೆಟ್ಟಿ ಕಲ್ಲಡ್ಕ ಆರೋಪಿಸಿದರು.
ಹಿಂದೂ ಜಾಗರಣಾ ವೇದಿಕೆಯ ಕೆದಿಲ ಘಟಕದ ಅಧ್ಯಕ್ಷ ಉಮೇಶ್ ಕೆದಿಲ, ಪೆರ್ನೆ  ಘಟಕದ ಅಧ್ಯಕ್ಷ ಮನೋಜ್ ಪೆರ್ನೆ , ಬಂಟ್ವಾಳ ಘಟಕದ ಕಾರ್ಯದರ್ಶಿ  ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *