ಬಂಟ್ವಾಳ: ಡಿಸೆಂಬರ್ ತಿಂಗಳ 18, 19 ಮತ್ತು 20ರಂದು ಮಲೇಶಿಯಾದಲ್ಲಿ ನಡೆಯಲಿರುವ 4ನೇ ಏಷ್ಯಾ ಇಂಟರ್ನೇಷನಲ್ ಇನ್ವೆಂಷನಲ್ ಓಪನ್ ಕರಾಟೆ ಚಾಂಪಿಯನ್ಶಿಪ್ 2015ರಲ್ಲಿ ಮಂಗಳೂರಿನ ಉರ್ವ ನಿವಾಸಿ ಪ್ರಭಾಕರ ಸುವರ್ಣ ಮತ್ತು ಗೀತಾ ದಂಪತಿ ಮಗಳು ಸಲೋನಿ ಪೂಜಾರಿ ಕರಾಟೆಪಟುವಾಗಿ ಭಾಗವಹಿಸಲಿದ್ದಾಳೆ.
BTW_DCE9_9
ಹತ್ತನೆ ತರಗತಿ ಓದುತ್ತಿರುವ ಈಕೆ ಮಂಗಳೂರು ಪಾಂಡೇಶ್ವರದ ಭಾರತೀಯ ವಿದ್ಯಾಭವನ ಕರಾಟೆ ಇನ್ಸ್ಟ್ಯೂಟ್ ನಲ್ಲಿ ಕರಾಟೆ ಅಭ್ಯಾಸ ನಡೆಸುತ್ತಿದ್ದು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ 50ಕ್ಕೂ ಅಧಿಕ ಪ್ರಶಸ್ತಿಗಳನ್ನು ಗಳಿಸಿದ್ದಾಳೆ. ಇದೀಗ ಬಾಳಕೃಷ್ಣ ಆಳ್ವ ಅವರ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಮಲೇಷ್ಯಾಕ್ಕೆ ತೆರಳಲಿರುವ ಸಲೋನಿ ಪೂಜಾರಿಯವರಿಗೆ ಶುಭಹಾರೈಸಿ, ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಸಮಾಜದ ಸಹೃದಯಿ ದಾನಿಗಳಿಂದ ಮತ್ತು ಸಜೀಪಮೂಡದ ಹಿಂದೂಶಕ್ತಿ ಕಲಾವೇದಿಕೆಯ ವತಿಯಿಂದ 35 ಸಾವಿರ ರುಪಾಯಿಗಳ ನೆರವನ್ನು ನೀಡಲಾಯಿತು. ಈ ಸಂದರ್ಭ ಹಿಂದೂ ಶಕ್ತಿ ಕಲಾ ವೇದಿಕೆ ಸಂಚಾಲಕ ಸತೀಶ್ ಪೂಜಾರಿ, ಕಾರ್ಯದರ್ಶಿ ಯಕ್ಷಿತ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಲತೇಶ್ ಕುಲಾಲ್, ಆರ್ ಎಸ್ ಎಸ್ ಸಜೀಪಮೂಡ ಗ್ರಾಮ ಸಮಿತಿ ಸಂಚಾಲಕ ಹೇಮಂತ ಪೂಜಾರಿ, ಯಶ್ವಿತ್ ಮಡಿವಾಳಪಡ್ಪು, ಲಕ್ಷಿತಾ ಕುಲಾಲ್, ಸಲೋನಿ ತಾಯಿ ಗೀತಾ ಸುವರ್ಣ ಹಾಜರಿದ್ದರು.

By suddi9

Leave a Reply

Your email address will not be published. Required fields are marked *