ಕೈಕಂಬ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸವಿತಾ ಸಮಾಜ ಸಂಘಟನೆಯ ಸಂಸ್ಥಾಪಕರಾಗಿದ್ದ ದಿ. ವಿಠಲ ಭಂಡಾರಿ ಕುಳಾಯಿ ಅವರ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಸಮಾಜದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ಡಿ. 8ರಂದು ಮಂಗಳ ಗುರುಪುರ ಕೈಕಂಬದ ಪ್ರೀಮಿಯರ್ ಸಭಾಂಗಣದಲ್ಲಿ ನಡೆಯಿತು.


ದ. ಕ. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದಿನೇಶ್ ಎಲ್. ಬಂಗೇರ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಸವಿತಾ ಸಮಾಜದ ನಾನಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿದರು.
ಸಮಾಜದ ಹಿರಿಯ ಸಕ್ರಿಯ ಕಾರ್ಯಕರ್ತ ತಪ್ಪ ಭಂಡಾರಿ ಬಜಪೆ ಹಾಗೂ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ವಿಜೇತೆ ಸಾಂಪ್ರದಾಯಿಕ ಪ್ರಸೂತಿತಜ್ಞೆ ಮುತ್ತು ಸುವರ್ಣ ಅವರಿಗೆ ಈ ಸಂದರ್ಭ ದಿ. ವಿಠಲ ಭಂಡಾರಿ ಕುಳಾಯಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಂಟ್ವಾಳ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಬಿ.ಸಿ.ರೋಡ್ ಇದರ ಉಪಾಧ್ಯಕ್ಷ, ಉಪನ್ಯಾಸಕ ಸುರೇಶ್ ನಂದೊಟ್ಟು ಅವರು ಸಂಸ್ಮರಣಾ ನುಡಿ ನಮನ ನಡೆಸಿದರು. ಆನಂದ ಭಂಢಾರಿ ಗುರುಪುರ ಸ್ವಾಗತಿಸಿದರು. ಜೊತೆ ಕಾರ್ಯದಶರ್ಿ ವಸಂತ್ ಎಂ. ಬೆಳ್ಳೂರು ಪ್ರಮಾಣ ಪತ್ರ ವಾಚಿಸಿದರು. ರಾಜ್ಯಪ್ರತಿನಿಧಿ ರವೀಂದ್ರ ಭಂಡಾರಿ ವಂದಿಸಿದರು.ದ. ಕ. ಜಿಲ್ಲಾ ಸವಿತಾ ಸಮಾಜದ ಕಾರ್ಯದಶರ್ಿ ಹರೀಶ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ
ಸಮಾಜದ ಜನಪ್ರತಿನಿಧಿಗಳಾದ ಮೂವತ್ತು ಜನರನ್ನು ಗೌರವಿಸಲಾಯಿತು.
