ಮಕ್ಕಳ ಭವಿಷ್ಯವನ್ನು ರೂಪಿಸುವುದು ಇಂದಿನ ಶೈಕ್ಷಣಿಕ ಅನಿವಾರ್ಯ- ವಂ.ಭ.ಮಾರಿಯೆಟ್ ಬಿಎಸ್
ಕೈಕಂಬ: ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ 2015-16ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಡಿ.4ರಂದು ಶುಕ್ರವಾರ ನಡೆಯಿತು. ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಅರ್ಪಿಸಬೇಕು. ಆ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಮಂಗಳೂರು ಬೆಥನಿ ವಿದ್ಯಾಸಂಸ್ಥೆಯ ಪ್ರಾಂತ್ಯಾಧಿಕಾರಿಗಳಾದ ವಂ.ಭ.ಮಾರಿಯೆಟ್ ಬಿಎಸ್ ಅಭಿಪ್ರಾಯಪಟ್ಟರು.
ಅವರು ವಾಮಂಜೂರು ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಘನ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.

15
1

2

3

4

5

6

7

8

9

10

11

12

13

14

 

16

17

18

19

20

21

22

23

24ಸಮಾರಂಭದಲ್ಲಿ ವಾಮಂಜೂರು ಸೈಂಟ್ ಜೋಸೆಫ್ ಚರ್ಚಿನ ಧರ್ಮಗುರುಗಳಾದ ರೆ.ಫಾ.ಸಿಪ್ರಿಯನ್ ಪಿಂಟೊ ಇವರು ಆಶಿರ್ವಾಚನ ಗೈದರು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಅವರ ಸರ್ವತೋಮುಖ ವಿಕಸನವಾಗುತ್ತದೆ. ಕ್ರೀಡೆಯಲ್ಲಿ ಸೂಕ್ತ ತರಭೇತಿಯನ್ನು ನೀಡಿ, ಉತ್ತಮ ಕ್ರೀಡಾಪಟುಗಳನ್ನು ರಾಜ್ಯ ರಾಷ್ಟ್ರಮಟ್ಟಕ್ಕೆ ಅರ್ಪಿಸುವ ಮಹತ್ತರ ಜವಬ್ದಾರಿ ಶಿಕ್ಷಣ ಸಂಸ್ಥೆಗಳಿಗಿದೆ ಎಂದು ಮುಖ್ಯ ಅತಿಥಿಗಳಾಗಿರುವ ಶ್ರೀಯುತ ಎವ್ಜಿನ್ ವಿಲ್ಪ್ರೆಡ್ ಪಿಂಟೊರವರು ನುಡಿದರು. ಮುಖ್ಯ ಅತಿಥಿಗಳಾಗಿ ಹೇಮಾಲತ ಆರ್ ಸಾಲಿಯಾನ್, ರೋಶನ್ ಕಾಮತ್, ರೋಸ್‍ಲಿಟ, ಸಂಚಾಲಕರು ಮಾರಿಲಿಟ, ಉಪಾಧ್ಯಕ್ಷರು ಗಂಗಾಧರ ಜೋಗಿ, ಕಾಲೇಜಿನ ಪ್ರಾಂಶುಪಾಲರು ವಂ.ಭ.ಸಾಧನ ಬಿಎಸ್ ಉಪಸ್ಥಿತರಿದ್ದರು. ಲಿಡ್ವಿನ್ ಮತ್ತು ಸವಿತಾ ಕಾರ್ಯಕ್ರಮ ನಿರೂಪಿಸಿ, ಅನಿತಾ ವಂದಿಸಿದರು.

By suddi9

One thought on “ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ”

Leave a Reply

Your email address will not be published. Required fields are marked *