ಹುಬ್ಬಳ್ಳಿ: ಉಮೇಶ್​​ ಕತ್ತಿ ಪತ್ನಿ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪುಷ್ಪಾ ಇಂದು ಕೊನೆಯುಸಿರೆಳೆದಿದ್ದಾರೆ. ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ಪುಷ್ಪಾ ಸಾವನ್ನಪ್ಪಿದ್ದು, ಸಂಬಂಧಿರಕ ಆಕ್ರಂದನ ಮುಗಿಲು ಮುಟ್ಟಿದೆ.

ಮೇ 2ರಂದು ದೆಅತಹ

ಹುಬ್ಬಳ್ಳಿಯ ವರೂರು ಬಳಿ ಉಮೇಶ್​ ಕತ್ತಿ ಪತ್ನಿ ಶೀಲಾ ಕತ್ತಿ ಕಾರು ಮೇ 2ರಂದು ಪುಷ್ಪಾಚೌಹಾಣ್​ಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಪುಷ್ಪಾರನ್ನು ತಕ್ಷಣ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 3ರಂದು ಪುಷ್ಪಾ ಗರ್ಭದಲ್ಲಿದ್ದ ಅವಳಿ ಮಕ್ಕಳು ಸಾವನ್ನಪ್ಪಿದವು. ನಂತರ ಪುಷ್ಪಾರನ್ನು ಬಾಲಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಪುಷ್ಪಾ ಸಾವನ್ನಪ್ಪಿದ್ದಾರೆ. ಮೊನ್ನೆ ಆಸ್ಪತ್ರೆಗೆ ಬಂದಿದ್ದ ಉಮೇಶ್ ಕತ್ತಿ ಆಪ್ತ ಸಹಾಯಕರು ಹಾಗೂ ಪುಷ್ಪಾ ಸಂಬಂಧಿಕರ ನಡುವೆ ಗಲಾಟೆ ಕೂಡ ನಡೆದಿತ್ತು. ಚಿಕಿತ್ಸೆಗೆ ಹಣ ನೀಡಲಿಲ್ಲ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

By suddi9

Leave a Reply

Your email address will not be published. Required fields are marked *