ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಇ.ಆರ್.ಡಬ್ಲ್ಯೂ.ಸಿ ಯೋಜನೆ ಕೈಕಂಬ ವಲಯದಲ್ಲಿ ರಚಿಸಲ್ಪಟ್ಟ ಪ್ರಕೃತಿ ಮಹಿಳಾ ಸ್ವಸಹಾಯ ಸಂಘ ಇದರ ದ್ವಿತೀಯ ವರ್ಷದ ವಾರ್ಷಿಕೋತ್ಸವವು ನ.30ರಂದು ಸೋಮವಾರ ಕಂದಾವರ ಪದವು ಝೀನತ್‍ರವರ ಮನೆಯಲ್ಲಿ ನಡೆಯಿತು.
4vp varshikostavaಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಗಳೂರು ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಧರ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ಸಬಲೀಕರಣ ಹಾಗೂ ಸಶಕ್ತತೆ ಕುರಿತು ಮಾತನಾಡಿದರು. ಕಂದಾವರ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ವಿಜಯ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮತ್ತು ಮಹಿಳೆಯರಿಗೆ ಸ್ವ ಉದ್ಯೋಗ ಮಾಡುವುದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕಂದಾವರ ಪಂಚಾಯತ್ ಅಭಿವೃದ್ದಿ ಅಧಿಕಾರಿ ರೋಹಿಣಿ.ಬಿ. ಇವರು ಮಹಿಳೆಯರ ಸಶಕ್ತೀಕರಣಕ್ಕೆ ಸರಕಾರ ಸವಲತ್ತಗಳನ್ನು ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರು.
ಪ್ರಜ್ಞಾ ಸಲಹಾ ಕೇಂದ್ರದ ಇ.ಆರ್.ಡಬ್ಲ್ಯೂ.ಸಿ ಯೋಜನೆಯ ಯೋಜನಾ ಸಂಯೋಜಕರಾದ ವಿಲಿಯಂ ಸಾಮ್ಯುವೆಲ್ ಉಪಸ್ಥಿತರಿದ್ದು ದೌರ್ಜನ್ಯ ಮುಕ್ತ ಸಮಾಜವನ್ನು ನಿರ್ಮಿಸಲು ಮಹಿಳೆಯರು ಒಟ್ಟು ಸೇರಬೇಕೆಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪುಷ್ಪಲತರವರು ಕಾರ್ಯಕ್ರಮ ಸ್ವಾಗತಿಸಿ, ಕುಮಾರಿ ಝೀನತ್ ನಿರೂಪಣೆ ಹಾಗೂ ತಂಡದ ವರದಿ ಮಂಡನೆಯನ್ನು ನೆರವೇರಿಸಿದರು.

By suddi9

Leave a Reply

Your email address will not be published. Required fields are marked *