ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ವರ್ಷದ ಷಷ್ಠಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಚೌಟ ಮಡಂದೂರು ಇವರು ಆಯ್ಕೆಯಾಗಿದ್ದಾರೆ.
ದೇವಳದ ಅನುವಂಶಿಕ ಮೊಕ್ತೇಸರ ಕೆ.ಸುಂದರ ರಾವ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ ಎಂ.ದುರ್ಗಾದಾಸ ಶೆಟ್ಟಿ ಮಾವಂತೂರು, ಕೆ.ಸತೀಶ ಆಚಾರ್ಯ ಕೈತ್ರೋಡಿ, ಉಪಾಧ್ಯಕ್ಷರಾಗಿ ರಾಜೇಶ ಗೋವಿಂದಬೆಟ್ಟ, ಶರತ್ ಕುಮಾರ್ ಕೊಯಿಲ, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ, ಪ್ರಕಾಶ ಕುಮಾರ್ ಜೈನ್ ಬೊಲ್ಲೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಅಣ್ಣಳಿಕೆ, ಕೋಶಾಧಿಕಾರಿಯಾಗಿ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಕೆ.ಶ್ರೀಯಾನ್ ಕೈತ್ರೋಡಿ, ವೈದಿಕ ಸಮಿತಿ ಸಂಚಾಲಕರಾಗಿ ಪ್ರಶಾಂತ್ ರಾವ್ ಸಜಂಕಬೆಟ್ಟು ಇವರು ಆಯ್ಕೆಗೊಂಡರು.
ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರವೀಂದ್ರ ಪೂಜಾರಿ ಸ್ವಾಗತಿಸಿ, ರಕ್ಷಿತ್ ಬುರಾಲ್ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
