ಹೈನುಗಾರಿಕೆಗೆ ಉಜ್ವಲ ಭವಿಷ್ಯ-ಕವಿರಾಜ್ ಹೆಗ್ಡೆ
ಮೂಡಬಿದರೆ: ಆನೆಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟದ “ಕ್ಷೀರ ಸಮೃದ್ಧಿ”ಯ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಹೈನುಗಾರಿಕೆಯಲ್ಲಿ ಉಜ್ವಲ ಭವಿಷ್ಯವಿದೆ.ಹಾಗೂ ವಿದ್ಯಾವಂತರು ಹೈನುಗಾರಿಕೆಯ ಬಗ್ಗೆ ಉತ್ಸುಕತೆಯನ್ನು ತೋರುವಂತದ್ದು ಹೈನುಗಾರಿಕೆಯ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಆನೆಗುಡ್ಡೆ ಸಂತ ಪ್ರಾನ್ಸಿಸ್ ಕ್ಷೇವಿಯರ್ ಚರ್ಚ್ನ ಫಾದರ್ ಜೆರಲ್ಡ್ ಪ್ರಾನ್ಸಿಸ್ ಆಶಿರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೆಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಸಂತಿ ಜೆ.ಕೋಟ್ಯಾನ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದ.ಕ.ಸಹಕಾರಿ ಹಾಲು ಒಕ್ಕೂಟ ನಿರ್ದೆಶಕಿ ಕೆ.ಪಿ.ಸುಚರಿತ ಶೆಟ್ಟಿ, ಡಾ.ಕೆ.ಎಂ. ಕೃಷ್ಣ ಭಟ್ ಕೊಂಕೋಡಿ, ಉಪ ನಿರ್ದೇಶಕರು ಮಧುಸೂಧನ ಕಾಮತ್, ವಿಸ್ತರಣಾಧಿಕಾರಿ ಎಸ್.ಎನ್.ದೇವರಾಜ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕಟ್ಟಡಕ್ಕೆ ಧನ ಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು. ಸಮಾರಂಭವನ್ನು ಸಂತೋಷ್ ಸಾಲ್ಡಾನರವರು ನಿರೂಪಿಸಿ, ಸಿಂತಿಯಾ ಡಿ’ಕುನ್ಹರವರು ವಂದನಾರ್ಪಣೆಗೈದರು.


