ಮೂಡುಬಿದರೆ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳವು ಕಳೆದ ಜೂನ್ನಲ್ಲಿ ನಡೆಸಿದ ಡಿ.ಸಿ.ಎಂ ಅಂತಿಮ ಪರೀಕ್ಷೆಯಲ್ಲಿ ಇಲ್ಲಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮೇನೇಜ್ಮೆಂಟ್(ಸಹಕಾರಿ ತರಬೇತಿ ಕೇಂದ್ರ) ಶೇ. 97% ಫಲಿತಾಂಶ ಗಳಿಸುವುದರೊಂದಿಗೆ ನಾಲ್ಕು ರ್ಯಾಂಕ್ಗಳನ್ನು ಪಡೆದುಕೊಂಡಿದೆ.
ಒಟ್ಟು 38 ವಿದ್ಯಾರ್ಥಿಗಳ ಪೈಕಿ 34 ಮಂದಿ ಉತ್ತೀರ್ಣರಾಗಿದ್ದಾರೆ. ಮಧುಶ್ರೀ(ಪ್ರಥಮ ರ್ಯಾಂಕ್), ದೀಪಕಾನಂದ (ಮೂರನೇ ರ್ಯಾಂಕ್), ಸವಿತಾ ಫ್ಲಾವಿಯಾ ರೋಚ್ (ಐದನೇ ರ್ಯಾಂಕ್), ಸಂತೋಷ್ ಭಂಡಾರಿ (ಆರನೇ ರ್ಯಾಂಕ್) ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
