ಕೈಕಂಬ: ಪದರಂಗಿ ಒಡ್ಡೂರು ಗ್ರಾಮೀಣ ರಸ್ತೆಗೆ ಸುಮಾರು ರೂ.2ಕೋಟಿಯನ್ನು ಮಂಜೂರು ಮಾಡಿದ ಮಂಗಳೂರು ಉತ್ತರ ವಿದಾನ ಸಭಾ ಕ್ಷೇತ್ರದ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಅವರು ನ.24 ಮಂಗಳವಾರ ಗುದ್ದಲಿಪೂಜೆ ನೇರವೇರಿಸಿದರು. ಒಡ್ಡೂರಿನಿಂದ ಕುಪ್ಪೆಪದವು ಸೇರುವ ರಸ್ತೆಗೆ ಈಗಾಗಲೇ 50 ಲಕ್ಷದ  ಕಾಮಗಾರಿ  ನಡೆದಿದ್ದು  ಉಳಿದ   ರಸ್ತೆಗೆ  ಸುಮಾರು ರೂ. 2.ಕೋಟಿಯನ್ನು ಲೋಕೋಪಯೋಗಿ ಇಲಾಖೆಯಿಂದ ಮಂಜೂರು ಗೊಳಿಸಿ    ಕಾಮಗಾರಿಯನ್ನು  ಒಡ್ಡೂರು ನಿಂದ  ಬೆಂಡೆಲ್ ಅಂಬಾ ಭವಾನಿ ದೇವಸ್ಥಾನದ ವರೆಗಿನ ರಸ್ತೆಯನ್ನು  ಜನರಿಗೆ ಅನುಕೂಲವಾಗುವಂತೆ   ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಿದಂತಾಗಿದೆ.
24vp mohidin bava

24vp mohidin bava-

1

2

1ಇನ್ನು ಈ ಭಾಗದ ಜನರ ಬೇಡಿಕೆಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಈಡೇರಿಸುವುದಾಗಿ ಶಾಸಕ ಮೊಹಿಯುದ್ದೀನ್ ಬಾವ ಈ ಸಂದರ್ಭದಲ್ಲಿ  ಹೇಳಿದರು. ಈ ಸಂಧರ್ಭದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಎ.ಪಿ.ಎಂ .ಸಿ .ಉಪಾಧ್ಯಕ್ಷ  ನೀಲಯ ಎಂ ಅಗರಿ , ಗಂಜಿಮಠ ಗ್ರಾ.ಪಂ.ಅಧ್ಯಕ್ಷೆ ಮಾಲತಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಅಮೀನ್, ಗಂಜಿಮಠ ಗ್ರಾ.ಪಂ.ನ ಸದಸ್ಯ ಜಿ.ಸುನೀಲ್, ಗ್ರಾ.ಪಂ.ಸದಸ್ಯ ದಾಮೋಧರ ಕೊಟ್ಟಾರಿ, ಸ್ಥಳೀಯರಾದ ಪ್ರವೀಣ್ ಫೆರ್ನಾಂಡಿಸ್, ಸಂತೋಷ್ ಸಲ್ಡಾನ, ಮಾಜಿ ತಾ. ಪಂ.ಸದಸ್ಯ ನೊಬರ್ಟ್  ಮತಾಯಸ್, ಎಡಪದವು ಗ್ರಾ.ಪಂ.ಮಾಜಿ ಸದಸ್ಯ ಮೊಹಿಯುದ್ದೀನ್ ಬಾವ,  ಎಡಪದವು ಗ್ರಾ.ಪಂ.ಮಾಜಿ ಸದಸ್ಯೆ ಚಂದ್ರವತಿ, ಪ್ರಕಾಶ್ ಪಿಂಟೊ, ಗುತ್ತಿಗೆದಾರರಾದ ನಾಗಪಯ್ಯ ಶೆಟ್ಟಿ  ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *