ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥಸ್ವಾಮೀಜಿ ಅವರು ಭಾನುವಾರ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡ ಬಳಿಕ ಭಕ್ತಾಧಿಗಳಿಗೆ ಸಾಮೂಹಿಕವಾಗಿ ತಪ್ತ ಮುದ್ರಾಧಾರಣೆ ನಡೆಸಿದರು.
400ಕ್ಕೂ ಹೆಚ್ಚು ಭಕ್ತಾಧಿಗಳಿಂದ ತಪ್ತ ಮುದ್ರಾಧಾರಣೆ..
22 vm kateel mudra1

22 vm kateel mudra 2

22 vm kateel mudra 3
ಸುದರ್ಶನ ಹೋಮದ ಅಗ್ನಿಗೆ ಶಂಖ ಹಾಗೂ ಚಕ್ರದ ಮುದ್ರೆಗಳನ್ನು ಸ್ಪರ್ಶಿಸಿ ಬಲ ತೋಳಿಗೆ ಚಕ್ರ ಎಡ ತೋಳಿಗೆ ಶಂಖದ ಬಿಸಿ (ತಪ್ತ) ಮುದ್ರೆ ಹಾಕುವುದು ಸಾಂಪ್ರದಾಯ ಕೆಲವರು ಪಂಚ (ಐದು) ಮುದ್ರೆಗಳನ್ನು ಹಾಕಿಸುತ್ತಾರೆ. ಎದೆಯ ಬಲಭಾಗಕ್ಕೆ ಚಕ್ರ ಎಡಬಾಗಕ್ಕೆ ಶಂಖದ ಮುದ್ರೆ ಹಾಕಲಾಗುತ್ತದೆ.
ಈಗೆ ಕಟೀಲು ದೇವಳದಲ್ಲಿ ಭಾನುವಾರ ಶ್ರೀಗಳು 4ನೇ ವರ್ಷದ ಮುದ್ರಾಧಾರಣೆಯನ್ನು 400ಕ್ಕೂ ಹೆಚ್ಚು ಮಂದಿ ಭಕ್ತಾಧಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿ ಅನುಗ್ರಹ ಸಂದೇಶ ನೀಡಿದರು.
ಮುದ್ರೆ ಹಾಕಿಸಿ ಕೊಳ್ಳಲು ಸ್ತ್ರೀ-ಪುರುಷ, ಜಾತಿ -ಮತದ ನಿರ್ಬಂಧವಿರಲಿಲ್ಲ. ವೇದಗಳ ಪ್ರಕಾರ ತಪ್ತಮುದ್ರಾಧಾರಣೆಯಿಂದ ದೇಹಕ್ಕೆ ಅಂಟಿರುವ ಪಾಪ ಕರ್ಮಗಳಿಂದ ಮುಕ್ತರಾಗಿ ಪವಿತ್ರರಾಗುತ್ತಾರೆ ಎಂಬ ನಂಬಿಕೆ ಇಲ್ಲಿ ಅಚಲವಾಗಿದೆ.
ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ತಂತ್ರಿಗಳಾದ ಶೀಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಧಾಮರ್ಿಕ ವಿಧಿಗಳು ನಡೆದು ಮುದ್ರಾಧಾರಣೆ ಕರ್ಯಕ್ರಮಕ್ರಮಕ್ಕೆ ಚಾಲನೆ ನೀಡಲಾಯಿತು.
ಅನುವಂಶಿಕ ಮುಕ್ತೇಸರ ವಾಸುದೇವ ಆಸ್ರಣ್ಣ ಅರ್ಚಕರುಗಳಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ,ಕಮಲಾದೇವಿಪ್ರಸನ್ನ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ ಮತ್ತಿತರರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *