ಬಂಟ್ವಾಳ : ಗಿರಿಜನ ಉಪಯೋಜನೆ ಹಾಗೂ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಪಿಲಿಮೊಗರು ಪರವರಕೋಡಿ ಪರಿಶಿಷ್ಟ ಜಾತಿ ಕಾಲನಿಗೆ ರೂ.13.18ಲಕ್ಷ ವೆಚ್ಚದ ಕಾಮಗಾರಿಯ ಗುದ್ದಲಿಪೂಜೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್ , ಎಫ್ರೆಂ ಸಿಕ್ವೇರಾ, ಬಂ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರುಗಳಾದ ಅರುಣ್ ಪ್ರಕಾಶ್ ಡಿಸೋಜ, ಗೋಪಾಲ್, ಪ್ರೀತಂ, ಪ್ರಮುಖರಾದ ಜಗದೀಶ್ ಕೊಯಿಲ, ದಿನೇಶ್ ಶೆಟ್ಟಿ ಪಂಜಿಕಲ್ , ಗುತ್ತಿಗೆದಾರ ಬಾಲರಾಜ್ ಉಪಸ್ಥಿತರಿದ್ದರು.
