ಬಂಟ್ವಾಳ ; ರಾಜ್ಯದಲ್ಲಿ ಹಿಂದೂ `ದರ್ಮದ ಮೇಲೆ ಮತ್ತು `ಧರ್ಮದ ರಕ್ಷಣೆ ಮಾಡುವವರ ಮೇಲೆ ಆಘಾತ ,ಆಕ್ರಮಣ ನಡೆಯುತ್ತಿದ್ದು `ಧರ್ಮದ ಸಂರಕ್ಷಣೆಗಾಗಿ ಜಾತಿಯನ್ನು ಪಕ್ಕಕ್ಕೆ ಸರಿಸಿ ಎಲ್ಲಾ ಹಿಂದೂ ಸಮಾಜ ಒಗ್ಗೂಡಬೇಕು ಎಂದು ರಾಜ್ಯದ ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಶುಕ್ರವಾರ ಬಂಟ್ವಾಳ ತಾಲೂಕು ಕೊಯಿಲ ಗ್ರಾಮದ ಪಿಲ್ಕಾಜೆಗುತ್ತು ಶ್ರೀ ಪಿಲಿಚಾಮುಂಡಿ, ಜುಮಾದಿ ಬಂಟ, ಮಹಿಸಂದಾಯ, ಕೊಡಮಣಿತ್ತಾಯಿ ಮತ್ತು ಪರಿವಾರದೈವಗಳ `ರ್ಮಚಾವಡಿಯ ಶ್ರೀ `ರ್ಮದೈವಗಳ ಪುನರ್ಪ್ರತಿಷ್ಠೆ ,ಕಲಶಾಭಿಷೇಕ ಮತ್ತು ನೇಮೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾಜದಲ್ಲಿ ಅತ್ಯಾಚಾರ ,ಅನಾಚಾರ ಅ`ರ್ಮ ಹೆಚ್ಚಾದಾಗ `ರ್ಮ ಸಂರಕ್ಷಣೆಗಾಗಿ ಧಾರ್ಮಿ ಕ ಕಾಯಕ್ರಮಗಳ ಮೂಲಕ ದೈವ ದೇವರುಗಳ ಪ್ರೇರೇಪಣೆ ನೀಡುತ್ತಿದ್ದು ಅನ್ಯಾಯ ಮಾಡುವವರಿಗೆ ಪ್ರಜಾಪ್ರಬುತ್ವದ ರೂಪದಲ್ಲಿ ಶಿಕ್ಷೆ ನೀಡಬೇಕಾಗಿದೆ.ಹಿಂದುತ್ವಕ್ಕೆ ತೊಂದರೆಯಾದಾಗ ಕಷ್ಟಗಳನ್ನು ಸಹಿಸಿ,ಹೋರಾಡಿ ಹಿಂದುತ್ವದ ರಕ್ಷಣೆ ಮಾಡುವಲ್ಲಿ ಇಡೀ ದೇಶಕ್ಕೆ ಮಂಗಳೂರು ಜಿಲ್ಲೆ ಮಾದರಿಯಾಗಿದೆ.ಜಿಲ್ಲೆಯ ಜನತೆಗೆ ತೊಂದರೆಯಾದಲ್ಲಿ ನಾವೆಲ್ಲರೂ ಒಟ್ಟು ಗೂಡುತ್ತೇವೆ ಎಂದು ನುಡಿದರು. ರಾ.ಸ್ವ.ಸೇ.ಸಂಘದ ದಕ್ಷಿಣ ಪ್ರಾಂತ ಸಂಚಾಲಕ್ ಡಾ|ಪ್ರಭಾಕರ ಭಟ್ ಕಲ್ಲಡ್ಕ ಅವರು ಅ`್ಯಕ್ಷತೆ ವಹಿಸಿದ್ದರು.ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ,ಬಾಲವನ ಸೊಸೈಟಿ ಮಾಜಿ ಅ`್ಯಕ್ಷೆ ಸುಲೋಚನಾ ಜಿ.ಕೆ.ಭಟ್,ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಎಂ.ತುಂಗಪ್ಪ ಬಂಗೇರ,ಬಂಟ್ವಾಳ ತಾ.ಪಂ.ಮಾಜಿ ಉಪಾ ಧ್ಯಕ್ಷ ಪುರುಷ ಎನ್.ಸಾಲ್ಯಾನ್,ಬಂಟ್ವಾಳ ಬಿ.ಜೆಪಿ ಅಧ್ಯ ಕ್ಷ ಜಿ.ಆನಂದ,ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ,ದಡ್ಡಲಕಾಡು ಶ್ರೀ ಜಗದಂಬಿಕ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ರಾಜೇಶ್ ನೆಕ್ಕರೆ ,ಪಿಲ್ಕಾಜೆಗುತ್ತು `ಧರ್ಮಚಾವಡಿಯ ನಿರ್ಮಾಪಕರಾದ ಗಳಾದ ಕೊರಗಪ್ಪ ಪೂಜಾರಿ, ವಸಂತಿ, ಪುರುಷೋತ್ತಮ ಅಂಚನ್, ಪ್ರಕಾಶ್ ಅಂಚನ್, ಶೇಖರ ಅಂಚನ್ ಉಪಸ್ಥಿತರಿದ್ದರು. ರಾಮದಾಸ ಬಂಟ್ವಾಳ ಅವರು ಸ್ವಾಗತಿಸಿದರು.ಪುರುಷೋತ್ತಮ ಅಂಚನ್ ಪ್ರಸ್ತಾವಿಸಿ ವಂದಿಸಿದರು. ಗಿರೀಶ್ ಕುಮಾರ್ ನಿರೂಪಿಸಿದರು ರುಗಳು

