ಸಾಂಪ್ರದಾಯಿಕ ಮತ್ತು ಸಾವಯವ ಕೃಷಿ ನಿಂತೇ ಹೋಯಿತೇನೋ ಎಂಬಷ್ಟರ ಮಟ್ಟಿಗೆ ದಿನಗಳಲ್ಲಿ ಕೃಷಿ ಬದುಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಮೌಲ್ಯಗಳು ಇನ್ನು ಇನ್ನೂ ಉಳಿದಿದೆ ಎಂಬುದಕ್ಕೆ ಪಡುಪೆರಾರ ಗ್ರಾಮದ ಮೂಲ ಪುರುಷ ದುಗ್ಗಣ ಬೈದರ ಮೂಲತಾನ ಕಬೆತ್ತಿಗುತ್ತು ಜ್ವಲಂತ ಸಾಕ್ಷಿಯಾಗಿದೆ.

ಬಹಳ ಪುರತನದಿಂದಲೂ ಬೊಂತೆಲ್ (ನವೆಂಬರ್) ತಿಂಗಳಿನ ನಿಗದಿಯಾಗುವ ಶಾಸ್ತ್ರೋಕ್ತ ದಿನದಂದು ಕಬೆತ್ತಿಗುತ್ತು ಕಂಬಳ ಗದ್ಧೆಯಲ್ಲಿ ಕೋಣಗಳನ್ನು ಓಡಿಸುವ ಸಾಂಪ್ರದಾಯಿಕ ಕಂಬಳ ನಡೆಯುತ್ತದೆ. ಕೋಣ *ಮಂಜೋಟ್ಟಿ* ಏರಿದ ಬಳಿಕ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಟ್ಟುಪಾಡುಗಳ ಬಳಿಕ ಬಾಳೆಗಿಡ ಹಾರಿಸಿ ಹಸ್ತಾಂತರ ಪ್ರಕ್ರಿಯೆ ನಡೆದು ಬಳಿಕ ಗದ್ಧೆಯ ಮಂಜೊಟ್ಟಿಯ ವಿರುದ್ಧ ತುದಿಯಲ್ಲಿ ನೆಡುವುದು ಬಾರೆಪಾಡು ಕಂಬಳದ ವೈಶಿಷ್ಟವಾಗಿದೆ .
ದೊಡ್ಡ ಕಂಬಳಗಳಲ್ಲಿರುವಂತೆಯೇ *ಬಾರೆ ಪಾಡು* ಕಂಬಳಕ್ಕೆ ಸಂಬಂಧಪಟ್ಟು ಕೂಡಾ ಗದ್ಧೆಯನ್ನು ದುಷ್ಟ ಶಕ್ತಿಗಳಿಂದ ಕಾವಲು ಕಾಯುವ *ಪನಿ ಕುಲ್ಲನು ಪದ್ದತಿ ಯಥಾವತ್ತಾಗಿ, ಸಾಂಕೇತಿಕವಾಗಿಯೇ ನಡೆದುಬಂದಿದೆ.
ಕುಂಬಳದ ಆರಂಭದಲ್ಲಿ ಕೋಣಗಳನ್ನು ಸಿಂಗರಿಸಿ ದೈವಗಳ ಚಾವಡಿಯೆದುರು ಮೊಣಕಾಲೂರಿ *ದೈವ ಶಕ್ತಿ*ಗಳಿಗೆ ನಮಿಸುವುದು ವಾಡಿಕೆ.
ಒಂದು ಕಾಲದಲ್ಲಿ 25ಕ್ಕೂ ಹೆಚ್ಚು ಜೋಡಿ ಕೋಣಗಳನ್ನು ಅವುಗಳ ಯಜಮಾನರು ತಂದು ಸಾಂಪ್ರದಾಯಿಕ ಕಂಬಳದಲ್ಲಿ ಹೆಗ್ಗಳಿಕೆಯಿಂದ ಪಾಲ್ಗೊಳ್ಳುತ್ತಿದ್ಧರು ಎಂಬುದನ್ನು ಹಿರಿಯರು ಈಗಲೂ ನೆನಪಿಸುತ್ತಾರೆ.
ಯಾಂತ್ರಿಕ ಕೃಷಿಗೆ ಶರಣಾಗಿದ್ಧರೂ…..
ಆದರೆ ಈಗ ಎಲ್ಲರೂ ಯಾಂತ್ರೀಕೃತ ಆಧುನಿಕ ಕೃಷಿ ಪದ್ಧತಿಗೆ ಶರಣಾಗಿರುವುದರಿಂದ ಮೂಡುಪೆರಾರ-ಪಡುಪೆರಾರ ಮಾಗಣೆಯಲ್ಲಿ ಎಲ್ಲೂ ಕೋಣಗಳೇ ಇಲ್ಲ. ಆದರೂ ಸಾಂಕೇತಿಕವಾಗಿಯಾದರೂ ಕಂಬಳ ನಡೆಸುವ ಉದ್ದೇಶದಿಂದ ಕಬೆತ್ತಿಗುತ್ತಿನ ಮನೆಯ ಈಗಿನ ಪ್ರಮುಖರಾದ ಮೋಹನ ಪೂಜಾರಿಯವರು ಕರಂಬಾರಿನ ವಿಠಲ ಪೂಜಾರಿ ಎಂಬವರ ಕೋಣಗಳನ್ನು ತಂದು ಸಾಂಪ್ರದಾಯಿಕ ಪದ್ಧತಿಯಂತೆ ಕಂಬಳ ನಡೆಸಿರುವುದು ಸಂಪ್ರದಾಯಿಕ ಪದ್ಧತಿಯಂತೆ ಕಂಬಳ ನಡೆಸಿರುವುದು ಉಲ್ಲೇಖನೀಯ. ಈ ಎಲ್ಲಾ ಸಂಸ್ಕಾರಗಳು ಮನೆಯ ಯಜಮಾನ, ಗುರಿಕಾರರು, ಧಾಮರ್ಿಕ ಪ್ರಮುಖರು, ಊರ ಹತ್ತು ಸಮಸ್ತರ ಉಪಸ್ಥಿತಿಯಲ್ಲೇ ನಡೆಯುತ್ತದೆ. ಕಂಬಳದ ಬೆನ್ನಿಗೇ ಗದ್ಧೆಯ ನಾಟಿಯಗುತ್ತದೆ.
ಬಳಿಕ ಕಂಬಳಕ್ಕೆ ಆಗಮಿಸಿದ ಎಲ್ಲರಿಗೂ *ಸಾಂಪ್ರದಾಯಿಕ ಮೆನುವಿನ ಊಟೋಪಚಾರವಿದೆ.
ಏಣಿಲು ಕೃಷಿಗೆ ಈ ಕಂಬಳ ಗದ್ಧೆಯಲ್ಲು ಈಗಲೂ ಸ್ವಲ್ಪವಾದರೂ ಸಣ್ಣಕ್ಕಿ ಬೆಳೆಯನ್ನು ಬೆಳೆಸಲೇಬೇಕು ಎಂಬ ನಿಯಮವಿದೆ. ಪೆರಾರ ಬಲವಾಂಡಿ ಕ್ಷೇತ್ರಕ್ಕೆ ಪುದ್ದರೆಚ್ಚೆ ನೇಮಕ್ಕೆ ಹಾಗೂ ವಾರ್ಷಿ ಕ ನೇಮೋತ್ಸವಕ್ಕೆ ಸಣ್ಣಕ್ಕಿ ಕಾಣಿಕೆ ನೀಡುವುದು ಕಿನ್ನಿಮಜಲು ಕಬೆತ್ತಿಗುತ್ತಿನ ಪುರಾತನ ಸಂಪ್ರದಾಯ.
ಒಟ್ಟಿನಲ್ಲಿ ಕಲ್ಲು, ಮಣ್ಣು, ಮರ, ಗೋವುಗಳಲ್ಲಿ, ದೇವತ್ವವನ್ನು ಕಂಡು ಆರಾಸುವ ತುಳುವರ ಸಂಸ್ಕಾರಗಳಲ್ಲಿ ಶಾಸ್ತ್ರೀಯತೆ, ಸಾಂಸ್ಕೃತಿಕ ಸಿರಿವಂತಿಕೆ ಇರುವುದನ್ನು ಆಧುನಿಕತೆಯ ಧಾವಂತದ ಮಧ್ಯೆಯೂ ನೆನೆವರಿಕೆ ಮಾಡುವ ಪ್ರಯತ್ನ ಇಲ್ಲಿ ನಿರಂತರ ನಡೆಯುತ್ತಿದೆ.
* ಕಬೆತ್ತಿಗುತ್ತಿನಲ್ಲಿ ಹಿಂದಿನಿಂದಲೂ ಹಿರಿಯರು ಅನುಸರಿಸಿದಂತೆ ಈಗಲೂ ಆಧುನಿಕ ಸವಾಲುಗಳ ನಡುವೆಯೂ ಕಂಬಳ, ಕಾಪು ಇಡುವುದು, ನೇಮ, ಪುದ್ಧರ್ ಇತ್ಯಾದಿಗಳನ್ನು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ನಡೆಸಲಾಗುತ್ತಿದೆ. ಊರಿನ ಸಾರ್ವಜನಿಕರು, ಇಷ್ಟ-ಮಿತ್ರರೂ ಪಾಲ್ಗೊಳ್ಳುತ್ತಾರೆ.
– ಮೋಹನ ಪೂಜರಿ ಕಬೆತ್ತಿಗುತ್ತು.
ಸದಸ್ಯರು, ಪಡುಪೆರಾರ ಗ್ರಾ.ಪಂ
