ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ನೂತನ ಪರೀಕ್ಷಾ ಕೇಂದ್ರವು ದಿನಾಂಕ ನ.2.ರ ಸೋಮವಾರದಂದು ಕಾರ್ಯಾರಂಭಗೊಂಡಿತು. 2015-16ನೇ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸುವ ಪದವಿ ಪರೀಕ್ಷೆಗಳ ಕೇಂದ್ರವಾಗಿ ಸದ್ರಿ ಪರೀಕ್ಷಾ ವಿದ್ಯಾಸಂಸ್ಥೆಗೆ ಮಾನ್ಯತೆ ನೀಡಿದೆ.

ವಿದ್ಯಾಕೇಂದ್ರದ ಸಂಚಾಲಕರಾದ ಡಾ||ಪ್ರಭಾಕರ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ಬಿ.ಕಾಂ, ಬಿ.ಎ ಹಾಗೂ ಬಿಬಿಎಂ ನ 370ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಒಟ್ಟು 24 ದಿನಗಳಲ್ಲಿ 36ಕ್ಕೂ ಹೆಚ್ಚು ಅವಧಿಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಡಿಸೆಂಬರ್ 11ರವರೆಗೆ ಈ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷರಾಗಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯಾರ್ಕಟ್ಟೆ, ಉಪಅಧೀಕ್ಷಕರಾಗಿ ರಾಮಕುಂಜ ಕಾಲೇಜಿನ ಕೃಷ್ಣಮರ್ತಿ ಕೆ. ಹಾಗೂ ಮುಖ್ಯ ಮೇಲ್ವಿಚಾರಕರಾಗಿ ರಂಜಿತ ಹಾಗೂ ಸಹಾಯಕರಾಗಿ ಶುಭಲಕ್ಷ್ಮಿ ನಿಯೋಜನೆಯಾಗಿದ್ದಾರೆ.
