ಕೈಕಂಬ:”ಹಿಂದೂ  ವಾರಿಯರ್ಸ್ “ಎಂಬ ಹೆಸರಿನೊಂದಿಗೆ  ಆಸಕ್ತ ಯುವ ಜನಾಂಗದಿಂದ ಅಶಕ್ತ ಬಡವರಿಗಾಗಿ, ಎಂಬ ಮೂಲ ಉದ್ದೇಶವನ್ನು ಇಟ್ಟುಕೊಂಡು ನಮ್ಮ ಸಮಾಜದಲ್ಲಿನ ತೀರಾ ಕೆಳವರ್ಗದ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡಕುಟುಂಬದ ಕಷ್ಟಗಳಿಗೆ ನೆರವಾಗಿ, ಅವರ ಕಣ್ಣೀರನ್ನು ಒರೆಸುವ ಕೆಲಸದೊಂದಿಗೆ ಸಮಾಜದಲ್ಲಿ ಹಾಗೂ ಸಮಾಜಿಕ ಜಾಲತಾಣಗಳಲ್ಲಿ, ತನ್ನದೇ ಸಮಾಜಮುಖಿ ಕೆಲಸಗಳ ಮೂಲಕ  ಗುರುತಿಸ್ಪಟ್ಟು “ಬಡವರ ಬಂಧು” ಬಡವರ ಪಾಲಿನ ಆಶಾಕಿರಣ, ವೆಂಬ ಜನಮನ್ನನೆಯನ್ನು ಪಡೆದು ಸಮಾಜಮುಖಿ ಕೆಲಸಗಳ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಇದೀಗ ಸಹಾಯ ಯೋಜನೆಯ ಏಳನೇಯ ಹೆಜ್ಜೆಯನ್ನು ಯಶಸ್ವಿಯಾಗಿ ತಲುಪಿದ್ದು ಹಿಂದೂ ವಾರಿಯರ್ಸ್ ಗುಂಪಿಗೆ ಇನ್ನೂಂದು ಯಶಸ್ಸಿನ ಗರಿಯಾಗಿದೆ…

s 5

ಸs1

s 3

s4

ಏಳನೇಯ ಸಹಾಯ ಯೋಜನೆಯ ಮಾಹಿತಿ;

ಇದೊಂದು ಸಾಮಾಜಿಕ ಜೀವನದ ಕಂಡು ಕಾಣದೆ ಉಳಿಯೋ ಅನೇಕ ಕಡು ಬಡವರ್ಗದ

ಜೀವನದ ತಲ್ಲಣದ ಪ್ರತಿರೂಪ. ಇಲ್ಲಿ ಕಣ್ಣಿರು ಕೂಡ ಕಣ್ಣಲೆ ಉಳಿದು ಹೋಗುತ್ತೆ ಕಾರಣ ಸ್ವಾಬಿಮಾನ ..
ಈ ದಯನೀಯ ಕತೆ ಸಾಧು ಪೂಜಾರಿ ಜಾನಕಿ ಪೂಜಾರ್ತಿ ಎಂಬ ಇಳಿ ದಂಪತಿಗಳದ್ದು
ಹಾಗು ಈ ಬಡ ಕುಟುಂಬ ಇರೋದು ಬಜಗೋಳಿ ಯ ಸಮೀಪ ಮಾಳ ಗ್ರಾಮದ ಪೇರಡ್ಕ.
ಕಳೆದ ಅನೇಕ ವರ್ಷದಿಂದ ಈ ದಂಪತಿ ಇದೆ ಮನೆಯಲ್ಲಿ ವಾಸವಾಗಿದ್ದಾರೆ ಬಹುಶಃ ಮನೆ ಅನ್ನುವುದಕ್ಕಿಂತ ಗುಡಿಸಲು ಇಲ್ಲ ಕ್ಷಮಿಸಿ ಗುಡಿಸಲು ಅನ್ನಲು ಬರೋದಿಲ್ಲ ಯಾಕೆಂದರೆ ಇದು ಮುಟ್ಟಿದರೆ ಧರೆಗೆ ಉರಳ ಬಹುದು…?
ಬಡತನ ತಾಂಡವ ಆಡುತ್ತಿರುವ ಈ ಕುಟುಂಬದಲ್ಲಿ ಮನೆಯ ಒಡೆಯ ಅನ್ನಿಸಿಕೊಂಡಿರುವವರು
ಕೂಲಿ ಕಾರ್ಮಿಕ ಈ ಇಳಿ ವಯಸಲ್ಲೂ ಮನೆಯ ಖರ್ಚು ಮಾತ್ರವಲ್ಲ ಅವರ ಮಗಳ ವಿದ್ಯಾಭ್ಯಾಸವನ್ನು
ನೋಡಿಕೊಳ್ಳುತ್ತಾರೆ ಇದೆಲ್ಲದರ ನಡುವೆ ಉಬ್ಬಸದಿಂದ ಖಾಯಿಲೆಗೆ ಬಿದ್ದಿರುವ ಹೆಂಡತಿ  ಅವರ ಮದ್ದಿಗೂ ತಿಂಗಳಿಗೆ ೧,೦೦೦ ಖರ್ಚು
ಇವರ ಸಮಸ್ಯೆಯನ್ನು ಮನಗಂಡು ಬಜರಂಗದಳ ಬಜಗೋಳಿ ವಲಯದ ಸಹಸಂಚಾಲಕರಾದ ಅಕ್ಷತ್ ಸುವರ್ಣ ಪಡುಮನೆ
ಹಾಗು ಬೀಯಿಂಗ್ ತುಳುವ ಹೆಲ್ಪ್ ಫೌಂಡೇಶನ್ ನ ಸ್ಥಾಪಕರಾದ ಗಣಿ ದೇವ್ ಇವರು ದಾನಿಗಳ ನೆರವು ಈ ಬಡಕುಟುಂಬಕ್ಕೆ ಪುಟ್ಟದಾದ ಮನೆ ಕಟ್ಟಿಕೊಡಲು ನಿರ್ದರಿಸಿ ದಾನಿಗಳ, ಸಂಘಸಂಸ್ಥೆಗಳ ನೆರವನ್ನು ಬಯಸಿದ್ದರು.

ಈ ಮಾಹಿತಿಯಂತೆ ಹಿಂದೂ ವಾರಿಯರ್ಸ್ ತಂಡ ಕಳೆದ ಜೂನ್ ತಿಂಗಳಿನಲ್ಲೇ ಸ್ಥಳಕ್ಕೆ ತೆರಳಿ ಆರ್ಥಿಕ ಅಡಚಣೆಗಳಿಂದ ಮನೆಯ ಅಡಿಪಾಯವಾಗಿ ಸ್ತಗಿತವಾಗಿದ್ದ ಕೆಲಸವನ್ನು ಮನಗಂಡು ಬಡಕುಟುಂಬವು ಆದಷ್ಟು ಬೇಗ ಮುರುಕಲು ಗುಡಿಸಲಿನಿಂದ ಮುಕ್ತಿ ಪಡೆಯಲೆಂಬ ಉದ್ದೇಶದಿಂದ ಜೂನ್ ತಿಂಗಳಿನ ಸಹಾಯ ಯೋಜನೆಯಾಗಿ ಕೈಗೆತ್ತಿಕೊಂಡು ಆಸರೆ ಯೋಜನೆಗೆ  ತಿಂಗಳಿನಲ್ಲಿ 45,000 ರೂಗಳನ್ನು ನೀಡಿ ಅಲ್ಲಿನ ನೈಜ ಪರಿಸ್ಥಿತಿಯನ್ನು ಮನಗಂಡು ಅವಶ್ಯಕತೆ ಬಿದ್ದರೆ ಇನ್ನೊಮ್ಮೆ ಸಹಾಯ ಮಾಡುವ ಭರವಸೆಯನ್ನು ನೀಡಿ ಬಂದಿತ್ತು.  ಈ ಸಹಾಯದಿಂದ ಸ್ಥಗಿತಗೊಂಡಿದ್ದ ಕೆಲಸ ಪುನಹ ಪ್ರಾರಂಭವಾಗಿ (ಇನ್ನೂ ಅನೇಕ ದಾನಿಗಳ ಮತ್ತು ಸಂಘ ಸಂಸ್ಥೆಗಳ ಹಾಗೂ ಹಲವು ವಾಟ್ಸಪ್ ಗ್ರೂಪ್ ಗಳ ನೆರವಿನಿಂದ) ಇದೀಗ ಮುಕ್ತಾಯದ ಹಂತದಲ್ಲಿದ್ದು ಪುನಹ ಆರ್ಥಿಕ ಅಡಚಣೆಗೆ ಒಳಗಾಗಿ ಸಂಪೂರ್ಣವಾಗಲು ಇನ್ನೂ 65-70 ಸಾವಿರ ರೂಗಳ ಅವಶ್ಯಕತೆ ಇದ್ದಿದ್ದು ,ಇದರಂತೆ ಹಿಂದೂ ವಾರಿಯರ್ಸ್ ತಂಡ ಪುನಹ ಅಕ್ಟೋಬರ್ ತಿಂಗಳ ಸಹಾಯ ಯೋಜನೆಯಾಗಿ  ಕೈಗೆತ್ತಿಕೊಂಡು ಕೊಟ್ಟ ಮಾತನ್ನು ಸಹ ಉಳಿಸಿಕೊಳ್ಳುವ ಜವಬ್ದಾರಿಯನ್ನು  ನೆನಪಿನಲ್ಲಿರಿಸಿಕೊಂಡು ನವಂಬರ್ 1 ರಂದು ಸ್ಥಳಕ್ಕೆ ತೆರಳಿ  70,000 ರೂಗಳ ನೆರವು ನೀಡುವುದರ ಜತೆಗೆ ಆಸರೆ ಯೋಜನೆಯ ಪ್ರಾರಂಭದ ಸಂಕಷ್ಟದಲ್ಲಿ ನೆರವಾಗಿದ್ದ ಹಿಂದೂ ವಾರಿಯರ್ಸ್ ಇದೀಗ ಮುಕ್ತಾಯದ ಅಡಚಣೆಗೂ ನೆರವಾಗುವ ಮೂಲಕ ಒಟ್ಟು 1ಲಕ್ಷ 15,ಸಾವಿರ (1,15000) ರೂಗಳನ್ನು  ನೀಡಿ ಬಡಕುಟುಂಬವೊಂದು ಕೆಲವೇ ದಿನಗಳಲ್ಲಿ ಮುರುಕಲು ಗುಡಿಸಲಿನಿಂದ ಮುಕ್ತಿ ಹೊಂದಲು ನೆರವು ನೀಡಿದ ಮುಗುಳ್ನಗೆ, ಸಂತೃಪ್ತಿಯೊಂದಿಗೆ ಯಶಸ್ವೀ ಏಳನೇಯ ಹೆಜ್ಜೆಯನ್ನು ತಲುಪಿತು..

ಹಿಂದೂ ವಾರಿಯರ್ಸ್ ವಾಟ್ಸಪ್ ಗುಂಪಿನಿಂದ ಸಂಗ್ರಹಿಸಲಾದ 70,000.ರೂಗಳನ್ನು ಗುಂಪಿನ ಸದಸ್ಯರಾದ ಹೆಬ್ರಿಯ “ಉಮೇಶ್” ಇವರು ಕುಟುಂಬಕ್ಕೆ ಹಸ್ತಾಂತರಿಸಿದರು ಈ ಸಮಯದಲ್ಲಿ ಕಾರ್ಕಳ ಬಜರಂಗದಳದ ನಗರ ಸಂಚಾಲಕರಾದ “ಅನಿಲ್ ಪ್ರಭು”, ಸುರಕ್ಷಾ ಪ್ರಮುಖ್ ಗಣೀ ದೇವ್ ಹಾಗೂ ಹಿಂದೂ ವಾರಿಯರ್ಸ್ ತಂಡದ ಸದಸ್ಯರಾದ ಶಿವು ಪುತ್ತೂರು, ನಾಗೇಶ್ ಪುತ್ತೂರು, ಅಕ್ಷತ್ ಸುವರ್ಣ, ಭವಿತ್,ಸತೀಶ್,ಅಶೋಕ್, ಸ್ವಾತಿಕ್,ಅಕ್ಷಯ್,ಅನಿಲ್,ಕಿರಣ್ ಬಳಂಜ, ಪದ್ಮಪ್ರಸಾದ್,ಕಿರಣ್,ಪ್ರಕಾಶ್,ವೆಂಕಟೇಶ್,ಯೋಗು, ಪ್ರದೀಪ್ ನಿಟ್ಟೆ,ಸುರೇಶ್ ಹಾಗೂ ಸದಸ್ಯೆಯರಾದ ಪ್ರಿಯಾ,ದಿವ್ಯಾ,ಸನ್ನಿಧಿ,ಸುಮಾ ಹಾಗೂ ಲತಾ ಉಪಸ್ತಿತರಿದ್ದರು..

ಸಹಾಯ ಯೋಜನೆಯ ನಂತರ ಹಿಂದೂ ವಾರಿಯರ್ಸ್ ತಂಡ ಬಜಗೋಳಿ ಯಿಂದ “ಕೊಡ್ಲು ತೀರ್ಥ” ಕ್ಕೆ ಮನೋರಂಜನೆಗಾಗಿ ತೆರಳಿದ್ದು ಅಲ್ಲಿಯೂ  ಪ್ರಕೃತಿಯ ಮಡಿಲಲ್ಲಿ ಖುಷಿಯಿಂದ ಮನೋರಂಜನೆಯನ್ನು ಆಸ್ವಾದಿಸಿಕೊಂಡು   ಅದರ ಜತೆಗೆ ತಂಡದ ಸಹೋದರ ಸಹೋದರಿಯರು “ಸ್ವಚ್ಚ ಭಾರತ್” ಅಭಿಯಾನವನ್ನೂ ಮಾಡಿ ಕೊಡ್ಲು ತೀರ್ಥ ದ ಭೇಟಿಯನ್ನು ಅವಿಸ್ಮರಣೀಯ ಕ್ಷಣವಾಗಿಸಿಕೊಂಡಿತು..

ಸಮಾಜಮುಖಿ ಚಿಂತನೆಯಲ್ಲಿ ವಿಭಿನ್ನತೆಯನ್ನ ಕಂಡ ನಮ್ಮ ಹಿಂದೂ ವಾರಿಯರ್ಸ್ ಕೆಳವರ್ಗದ ಜನರ ಆಧಾರ ಸ್ತಂಬವಾಗಿ ನಿಲ್ಲುತ್ತಾ,ಜನರಲ್ಲಿ ಸ್ವಚ್ಚ ಸಮಾಜದ ನಿರ್ಮಾಣದಿಂದ ಸ್ವಸ್ಥ ಸಮಾಜ ನಿರ್ಮಾಣ ಆಗುತ್ತೆ ಎಂದು ಜನರ ಮನವೊಲಿಸುವ ಕಾರ್ಯವನ್ನು ಕೂಡ ಮಾಡುತ್ತಿದೆ ಇದರ ಜೊತೆಯಲ್ಲಿ ಮಹತ್ತರವಾದ ಇನ್ನೊಂದು ಕಾರ್ಯ ರೋಗಮುಕ್ತ ಹಿಂದೂ ಸಮಾಜಕ್ಕಾಗಿ “ರಕ್ತದಾನ” ವನ್ನು ಮಾಡುತ್ತಿದೆ. “ಹಿಂದೂ ವಾರಿಯರ್ಸ್ ಬ್ಲಡ್” ಎಂಬ ಹೆಸರಿನಲ್ಲಿ ಸುಮಾರು 91 ಸಕ್ರೀಯ ಸದಸ್ಯರನ್ನೊಳಗೊಂಡು ಇಲ್ಲಿಯವರೆಗೆ ಅನೇಕ ಜೀವಗಳಿಗೆ ಮಂಗಳೂರು,ಉಡುಪಿ,ಸುಳ್ಯ,ಪುತ್ತೂರು,ಬೆಂಗಳೂರು ಮುಂತಾದೆಡೆ ತ್ವರಿತವಾಗಿ ರಕ್ತದಾನ ಮಾಡಿದ ಹೆಮ್ಮೆ ನಮ್ಮದು.

“ಹಿಂದೂ ವಾರಿಯರ್ಸ್ “ಮತ್ತು “ಹಿಂದೂ ವಾರಿಯರ್ಸ್ ಬ್ಲಡ್” ಈ ನಮ್ಮ ವಾಟ್ಸಪ್ ತಂಡ ಸೇರಲಿಚ್ಚಿಸುವವರು ಇವರನ್ನ ಸಂಪರ್ಕಿಸಬಹುದು

ಶಿವು ಪುತ್ತೂರು
9972737528

ನಾಗೇಶ್ ಪುತ್ತೂರು
8951571979

ನಮ್ಮ ತಂಡದ ಏಳನೇಯ ಸೇವಾಯೋಜನೆಯು ಯಶಸ್ವಿಯಾಗುವಲ್ಲಿ ಸಹಕರಿಸಿದ ಎಲ್ಲಾ ಸಹೋದರ ಸಹೋದರಿಯರಿಗೂ ಹಿಂದೂ ವಾರಿಯರ್ಸ್ ವಾಟ್ಸಪ್ ಗ್ರೂಪ್ ನ  ವತಿಯಿಂದ ಪ್ರೀತಿಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ..

By suddi9

Leave a Reply

Your email address will not be published. Required fields are marked *