ಮೂಡುಬಿದರೆ: ಪ್ರಗತಿಪರ ಕೃಷಿಕ ದಿ.ಜೀವಂಧರ್ ಕುಮಾರ್ ಮಿಜಾರು ಶ್ರದ್ಧಾಂಜಲಿ ಶನಿವಾರ ಸ್ವರ್ಣ ಮಂದಿರದಲ್ಲಿ ನಡೆಯಿತು.
ಪುತ್ತೂರಿನ ಹಿರಿಯ ಕೃಷಿಕ ಮೂಲಚಂದ್ರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮಾದರಿ ರೈತರಾಗಿ ಸ್ವಾವಲಂಬಿ ಜೀವನ ನಡೆಸಿದ್ದ ಜೀವಂಧರ್ ಕುಮಾರ್ ಅವರು ಕೃಷಿಯ ಜತೆಗೆ ಪರಿಸರವನ್ನು ಪ್ರೀತಿಸಿದವರು ಎಂದು ಹೇಳಿದರು.
mbd_nov1_2

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಂಗಳೂರು ತಾಲ್ಲೂಕು ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಮಾತನಾಡಿ ಜೀವಂಧರ್ ಕುಮಾರ್ ಕೃಷಿಯನ್ನೆ ಬದುಕನ್ನಾಗಿಸಿಕೊಂಡವರು. ಕೃಷಿಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಸಿ ಯಶಸ್ವಿಯಾಗಿದ್ದರು. ಅವರ ಆದರ್ಶಗಳು ಕೃಷಿಕರಿಗೆ ಅನುಕರಣೀಯ ಎಂದರು.
ಮಂಗಳೂರಿನ ಕೆ.ಎಂ.ಎಫ್ ನಿರ್ದೆಶಕ ಕೆ.ಪಿ ಸುಚರಿತ ಶೆಟ್ಟಿ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಲ್ ಶ್ರೀನಿವಾಸ ಭಟ್, ಮಿಜಾರುಗುತ್ತು ಆನಂದ ಆಳ್ವ, ಕೃಷಿ ವಿಚಾರ ವಿನಿಮ0ು ಕೇಂದ್ರದ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ವಕೀಲ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿದರು. ಪ್ರವೀಣ್ ಕುಮಾರ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *