ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಮಾಡಲಾಯಿತು. ಲೋಕೇಶ್ ಸುರತ್ಕಲ್ ವಿಜಯ ಕರ್ನಾಟಕ ಪತ್ರಕಾ ವರಧಿಗಾರರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸುರತ್ಕಲ್ ಕ್ಷೇತ್ರದ ಶಾಸಕ ಮೊಯಿದಿನ್ ಬಾವಾ, ಐವನ್ ಡಿ.ಸೋಜಾ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕಲ್ಕೂರ ಇದ್ದರು.
ಎಸ್.ಡಿ.ಸಂಪತ್ ಸಾಮ್ರಾಜ್ಯ (ಕೃಷಿ), ಎನ್.ಸುಲೈಮಾನ್ ನಾರ್ಶ ಬಂಟ್ವಾಳ, ಯು.ಎಚ್. ಖಾಲಿದ್ ಉಜಿರೆ(ಶಿಕ್ಷಣ), ಕೋರಿನ್ ಆಂಟೋನಿಯಟ್ ರಸ್ಕಿನಾ ಮಂಗಳೂರು, ಸಿ.ಎಷ್.ಕೋಚಣ್ಣ ರೈ ಪುತ್ತೂರು, ನಾರಾಯಣ ಪಿ.ಎಂ. ಮೂಡಬಿದರೆ, ಉರ್ಬಾನ್ ಪಿಂಟೋ ಹೊಸಬೆಟ್ಟು (ಸಮಾಜ ಸೇವೆ), ಬಾಲಕೃಷ್ಣ ಪತ್ತಿಗೆ ಮಂಗಳೂರು, ಡಿ.ಎಂ.ಅಸ್ಲಂ ಮಂಗಳೂರು(ಕ್ರೀಡೆ), ಡಾ.ವಿಶ್ವನಾಥ ನಾಯಕ್ ಪಿ.ಬಂಟ್ವಾಳ(ವೈದ್ಯಕೀಯ), ಶಾರದ ಬಾರ್ಕೂರ್ ಮಂಗಳೂರು(ರಂಗಭೂಮಿ), ಪುರಂದರ ಪಿ.ಜೆ.ಬೆಳ್ತಂಗಡಿ, ದಿವಾಕರ ದಾಸ್ ಬಂರ್ಠಔಆಳ (ಅಂತಾರಾಷ್ಟ್ರೀಯ ಕ್ರೀಡೆ), ಶೀನ ಪರವ ಪುತ್ತೂರು (ಜಾನಪದ ಕಲೆ), ಸಂತೋಷ್ ಐತಾಳ್ ಕುಳಾಯಿ( ಕಲೆ, ಸಾಮಸ್ಕೃತಿಕ), ಕೇಶವ ವಿಟ್ಲ (ಛಾಯಾಗ್ರಾಹಕ), ಮಾನ್ಯ ತಿಮ್ಮಯ್ಯ ಕಾಸರಗೋಡು(ಯಕ್ಷಗಾನ), ಶಕ್ತಿನಗರ ಸಾನಿಧ್ಯ ಸಂಸ್ಥೆಯ ವಸಂತ್ ಕುಮಾರ್ (ವಿಶೇಷ ಮಕ್ಕಳ ಸೇವಾ ಸಂಸ್ಥೆ) ಅವರಿಗೆ 2015ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜ ಸೇವೆಗೆ ನೀಡಲಾದ ಪ್ರಶಸ್ತಿಯನ್ನು ಜೂಎಇತ್ ಮೇರಿ ರೀಟಾ ಮಸ್ಕರೇಸ್ ಅವರ ಪರವಾಗಿ ರೆ.ಫಾ.ಲಿಯೋ ಸಿಕ್ವೇರ ಸ್ವೀಕರಿಸಿದರು.
