ವಾಮಂಜೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾಮಂಜೂರು -ತಿರುವೈಲು ಪ್ರದೇಶದ ಉತ್ತರ ಬೆಟ್ಟು ನಿವಾಸಿ ಶ್ರೀಮತಿ ರೋಹಿಣಿ ಭೋಜ ದೇವಾಡಿಗ ಇವರು ತೀರಾ ಬಡವರಾಗಿದ್ದು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು ಇವರಿಗೆ ವಾಸಿಸಲು ಮನೆ ನಿವೇಶವನ್ನು ತಿರುವೈಲು ವಾರ್ಡಿನ ಕಾರ್ಪೊರೇಟರ್ ಶ್ರೀಮತಿ ಹೇಮಲತಾ ಆರ್. ಸಾಲ್ಯಾನ್ ರವರ ನೇತೃತ್ವದಲ್ಲಿ ಊರಿನ ಗಣ್ಯರ ಸಮ್ಮುಖದಲ್ಲಿ ದಾನಿಗಳ ಸಹಕಾರದಲ್ಲಿ ಅಂದಾಜು ವೆಚ್ಚ ಸುಮಾರು 2.50ಲಕ್ಷ ರೂಪಾಯಿಯಲ್ಲಿ ನಿರ್ಮಿಸಲಾದ ಮನೆಯನ್ನು ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಹೇಮಲತಾ ರಘು ಸಾಲ್ಯಾನ್‍ರವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜೈಶಂಕರ್ ಮಿತರ ಮಂಡಳಿಯ ಅಧ್ಯಕ್ಷರಾದ ಗಿರೀಶ್ ಆಚಾರ್ಯ, ಉದ್ಯಮಿ ಮೋಹನ್‍ದಾಸ್ ಶೆಟ್ಟಿ , ಶಿವಾನಂದ ಆಚಾರ್ಯ, ದಿನೇಶ್ ಜೆ.ಕರ್ಕೆರ. ಬಿ.ಜೆ.ಪಿ ಸ್ಥಾನೀಯ ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ಬಾಲಕೃಷ್ಣ ಅಂಚನ್ ಸ್ಥಳೀಯರಾದ ಪುರುಷೋತ್ತಮ ಅಂಚನ್, ದಿವಾಕರ ಆಚಾರ್ಯ, ಮೋಹನ್‍ದಾಸ್, ಅಶೋಕ್ ಅಮೀನ್, ಅನಿಲ್ ರೈ ಮುಂತಾದವರು ಭಾಗವಹಿಸಿದ್ದರು.


