ಬಂಟ್ವಾಳ: ನಾಲ್ಕುವರೆ ವರ್ಷದ ಹಿಂದಿನ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ಬಂಟ್ವಾಳ ಜೆ.ಎಮ್.ಸಿ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ರಾಜಕೀಯ ದ್ವೇಷದ ಹಿನ್ನಲೆಯಲ್ಲಿ 2011 ರ ಜೂನ್ 19 ರಂದು ಸಂಜೆ 4.30 ಗಂಟೆಗೆ ಮೂಡು ನಡುಗೊಡು ಗ್ರಾಮದ ರಾಮನಗರ ಎಂಬಲ್ಲನ ಜಗದೀಶ ಅವರ ಮನೆಗೆ ಆರೋಪಿಗಳಾದ ಗೋವಿಂದ ಪ್ರಭು, ಚರಣ್ ಜುಮಾಧಿಗುಡ್ಡೆ, ಕೇಶವ, ಲಕ್ಷ್ಮೀನಾರಾಯಣ ಜಕ್ರಿಬೆಟ್ಟು ಅಕ್ರಮವಾಗಿ ಪ್ರವೇಶ ಮಾಡಿ ಹಲ್ಲೆನಡೆಸಿದ್ದು ತಡೆಯಲು ಬಂದ ಜಗದೀಶ ಅವರ ಪತ್ನಿ ಪುಷ್ಪಾವತಿಯವರ ಮೇಲೆ ಕೈಮಾಡಿ ಮಾನಕ್ಕೆ ದಕ್ಕೆ ಮಾಡಿ, ಮನೆಯೊಳಗಿದ್ದ ಸೊತ್ತುಗಳನ್ನು ಜಖಂಗೊಳಿಸಿ ಜೀವಬೆದರಿಕೆ ಒಡ್ಡಿದ್ದರು.
ಈ ಬಗ್ಗೆ ಠಾಣೆಗೆ ದೂರು ನೀಡಲು ಬರುತ್ತಿರುವಾಗ ಜಗದೀಶ ಅವರ ಮೊಬೈಲ್ಗೆ ಕರೆ ಮಾಡಿ ಆರೋಪಿ ಚರಣ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಅಂದಿನ ಉಪನಿರೀಕ್ಷಕ ಎಂ.ಆರ್.ಎಂ ತಹಶೀಲ್ದಾರ್ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದರು. ಇಂದು ಎಲ್ಲಾ ಆರೋಪಿಗಳಿಗೆ ಆರು ತಿಂಗಳು ಶಿಕ್ಷೆ ಆರು ಸಾವಿರ ರೂ ದಂಡವನ್ನು ಎಸಿಜೆ(ಜೆ.ಡಿ) ಮತ್ತು ಜೆ.ಎಂ.ಸಿ ಬಂಟ್ವಾಳ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಎಂ.ಎಸ್.ಆಲಿ ವಾಧಿಸಿದ್ದರು
