ಬಂಟ್ವಾಳ, ಎ. 29: ಬ್ರಹ್ಮರಕೂಟ್ಲು ಟೋಲ್  ಪ್ಲಾಜಾ  ಅವ್ಯವಸ್ಥೆ, ಸೌಲಭ್ಯಗಳ ಕೊರತೆ, ಸುರಕ್ಷಾ ಕ್ರಮಗಳ ಬಗ್ಗೆ ಬಂಟ್ವಾಳ ತಹಶೀಲ್ದಾರ್ ಕಛೇರಿಯಲ್ಲಿ ಎ. 29ರಂದು ಕರೆದಿದ್ದ ಉನ್ನತ ಮಟ್ಟದ ಸಭೆಯನ್ನು ಮಂಗಳೂರು ಉಪ ವಿಭಾಗಾಕಾರಿ ಡಾ| ಪ್ರಶಾಂತ್ ರದ್ದು ಪಡಿಸಿದ ಘಟನೆ ನಡೆದಿದೆ.
ಸಂಜೆ 6.30 ಸುಮಾರಿಗೆ ಸಭೆಯನ್ನು ಕರೆಯಲಾಗಿತ್ತು. ಹೆದ್ದಾರಿ ಪ್ರಾಕಾರ ಪಿಆರ್ ಓ  ಪಾಲ್ಗೊಳ್ಳದ ಕಾರಣಕ್ಕೆ ಸಭೆಯನ್ನು ರದ್ದು ಪಡಿಸಿದ್ದಾಗಿ ಅವರು ಕಾರಣ ನೀಡಿ ಹೊರ ನಡೆದಿದ್ದರು.
ಸಭೆಗೆ ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ರಶ್ಮಿ ಪರೆಡ್ಡಿ ಮತ್ತು ಪೊಲೀಸ್ ಅಕಾರಿಗಳು, ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ, ಟೋ ಲ್ ಗುತ್ತಿಗೆದಾರ ಗೋಪಾಲಕೃಷ್ಣ ಮೆಲಾಂಟ ಹಾಜರಾಗಿದ್ದರು.

By suddi9

Leave a Reply

Your email address will not be published. Required fields are marked *