ಬಂಟ್ವಾಳ: ಸರಕಾರ ಇಲಾಖೆಗಳ ಹೊಸತಾದ ವಿಂಗ್ ಕಾರ್ಯರೂಪಕ್ಕೆ ತರುವುದು ಸುಲಭ ಆ ನಂತರದ ದಿನಗಳಲ್ಲಿ ಅದಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಪೂರೈಸುವಲ್ಲಿ ಮರೆಯಬಾರದು , ಈರೀತಿಯಾದರೆ ಅಂತಹ ಇಲಾಖೆಗಳು ಇದ್ದು ಇಲ್ಲಂದಾಗುತ್ತದೆ. ಯಾವುದೇ ಸರಕಾರಿ ಇಲಾಖೆಗಳನ್ನು ಜನರ ಬೇಡಿಕೆಯಂತೆ ಕಾರ್ಯರೂಪಕ್ಕೆ ತಂದಾಗ ಅದಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡದಿದ್ರೆ ಕಾರ್ಯನಿರ್ವಹಿಸಲು ತೊಡಕಾಗುತ್ತದೆ. ಬಂಟ್ವಾಳಕ್ಕೆ ನಿತ್ಯದ ಟ್ರಾಫಿಕ್ ಕಿರಿಕಿರಿ ಮತ್ತು ಇನ್ನಿತರ ಟ್ರಾಫಿಕ್ಗೆ ಸಂಬಂದಪಟ್ಟ ಸಮಸ್ಯೆಗಳನ್ನು ನಿವಾರಿಸಲು ಬಹು ಅಗತ್ಯವಾದ ಟ್ರಾಫಿಕ್ ಪೋಲೀಸ್ ಠಾಣೆ ಆರಂಭವಾಗಿ ಒಂದು ವರ್ಷ ವಾಗುತ್ತಾ ಬಂದರೂ ಇನ್ನೂ ಕೂಡಾ ಸ್ವಂತ ಸೂರಿನ ಬಾಗ್ಯ ದೊರೆತಿಲ್ಲ ಮತ್ತು ಬೇಕಾದ ಮೆನ್ಗಳ ನೇಮಕವಾಗಿಲ್ಲ.

ಬಾಡಿಗೆ ಕಟ್ಟಡದಲ್ಲಿ ನೆಲೆಕಂಡುಕೊಂಡಿರುವ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಸ್ವಂತ ಸೂರಿನ ಹುಡುಕಾಟದಲ್ಲಿದೆ. ಮೆಲ್ಕಾರಿನ ಮನೆಯೊಂದರಲ್ಲಿ ಒಂದೆರಡು ವರ್ಷಗಳಿಗಾಗಿ ಬಾಡಿಗೆ ಆಧಾರದಲ್ಲಿ ತಾತ್ಕಲಿಕ ಸೂರು ಕಂಡುಕೊಂಡಿರುವ ನೂತನ ಠಾಣೆಗೆ ಶೀಘ್ರವೇ ಸ್ವಂತ ಕಟ್ಟಡ ಬೇಕಾಗಿದೆ.
ಹಲವು ವರ್ಷಗಳ ಕಾಲ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡಿನಲ್ಲಿ ಜನರನ್ನು ಪೀಡಿಸಿದ್ದ ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕೆ ಬಂಟ್ವಾಳಕ್ಕೊಂದು ಪ್ರತ್ಯೇಕ ಸಂಚಾರಿ ಪೊಲೀಸ್ ಠಾಣೆ ಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿತ್ತು. ಜನತೆಯ ಬೇಡಿಕೆಯಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈವರ ವಿಶೇಷ ಪ್ರಯತ್ನದಲ್ಲಿ ನೂತನ ಠಾಣೆಯೂ ಮಂಜೂರುಗೊಂಡಿತ್ತು. ಮೆಲ್ಕಾರ್ನ ಬಾಡಿಗೆ ಕಟ್ಟಡವೊಂದರಲ್ಲಿ ತಾತ್ಕಲಿಕವಾಗಿ ಠಾಣೆ ಕಾರ್ಯರಂಭಗೊಳಿಸಲಾಯಿತು.
ಗೂಡಿನಬಳಿಯಲ್ಲಿ ಸ್ಥಳ ಗುರುತು:
ಬಾಡಿಗೆ ಕಟ್ಟಡದಲ್ಲಿ ಸಂಚಾರಿ ಪೊಲೀಸ್ ಠಾಣೆ ಆರಂಭಗೊಂಡಂದಿನಿಂದ ಸ್ವಂತ ಕಟ್ಟಡಕ್ಕೆ ಸ್ಥಳದ ಹುಡಕಾಟ ನಿರಂತರವಾಗಿ ನಡೆದಿದೆ. ತಾಲೂಕು ಕೇಂದ್ರ ಸ್ಥಾನ ಬಿ.ಸಿ.ರೋಡಿನಲ್ಲಿ ಇದ್ದ ಸರ್ಕಾರಿ ಜಮೀನು ಬೇರೆ ಬೇರೆ ಇಲಾಖೆಗಳಿಗೆ ಈಗಾಗಲೇ ಹಂಚಿ ಹೋಗಿರುವುದರಿಂದ ಸಂಚಾರಿ ಠಾಣೆ ಕಟ್ಟಡ ನಿರ್ಮಾಣಕ್ಕೆ ಬಿ.ಸಿ.ರೋಡಿನಲ್ಲಿ ಅಗತ್ಯ ಜಮೀನು ಲಭ್ಯವಾಗಿಲ್ಲ. ಗೂಡಿನಬಳಿಯಲ್ಲಿ ಹಳೇ ಸೇತುವೆ ಪಕ್ಕ ಪಶುವೈದ್ಯಕೀಯ ಆಸ್ಪತ್ರೆಯ ಹಳೇ ಕಟ್ಟಡವೊಂದು ಕೆಲ ವರ್ಷಗಳಿಂದ ಪಾಳು ಬಿದ್ದಿದ್ದು ಈ ಕಟ್ಟಡವನ್ನು ತೆರವುಗೊಳಿಸಿ ಠಾಣೆ ನಿರ್ಮಿಸಲು ನಿರ್ಧರಿಸಲಾಗಿದೆ. ಇಲ್ಲಿ 0.48 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು ಇದೇ ಸ್ಥಳ ಸೂಕ್ತ ಎನ್ನುವ ನಿರ್ಧರಕ್ಕೂ ಬರಲಾಗಿದೆ. ಸರ್ವೆ ಇಲಾಖೆಯಿಂದ ಸರ್ವೆ ಕಾರ್ಯ ಪೂರ್ಣಗೊಂಡಿದೆ. ತಾಲೂಕು ಕಚೇರಿಯಲ್ಲಿ ಮುಂದಿನ ಪ್ರಕ್ರಿಯೆಗಳು ನಡೆದು ಜಿಲ್ಲಾಧಿಕಾರಿಯಿಂದ ಅಂಕಿತ ಬಿದ್ದಲ್ಲಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗೆ ಇದೇ ಸ್ಥಳ ಅಂತಿಮವಾಗಲಿದೆ.
ಸಿಬ್ಬಂದಿಗಳ ಕೊರತೆ:
ಸ್ವಂತ ಕಟ್ಟಡ ನಿರ್ಮಾಣಕ್ಕಿಂತಲೂ ಸಿಬ್ಬಂದಿಗಳ ನೇಮಕಾತಿ ಅತ್ಯಂತ ಜರೂರಾಗಿ ಆಗ ಬೇಕಾಗಿದೆ. ಠಾಣೆಗೆ ಅಗತ್ಯ ಬೇಕಾಗಿರುವುದು 40 ಮಂದಿ ಸಿಬ್ಬಂದಿ. ಕತ್ರ್ಯವ್ಯದಲ್ಲಿರುವುದು ಕೇವಲ 10 ಮಂದಿ ಮಾತ್ರ. ಇವರಲ್ಲಿ 6 ಮಂದಿ ಠಾಣೆಯ ಕೆಲಸಗಳನ್ನು ನಿರ್ವಹಿಸ ಬೇಕು. ಉಳಿದ ನಾಲ್ಕು ಮಂದಿ ಟ್ರಾಫಿಕ್ನಲ್ಲಿ ಕರ್ತವ್ಯ ನಿರ್ವಹಿಸ ಬೇಕು. ಬಿ.ಸಿ.ರೋಡು, ಸರ್ಕಲ್, ಕೈಕಂಬ, ಮೆಲ್ಕಾರ್, ಕಲ್ಲಡ್ಕ, ತುಂಬೆ ಜಂಕ್ಷನ್ ವಾಹನಗಳ ದಟ್ಟಣೆಯಿರುವ ಹಾಗೂ ಸಿಬ್ಬಂದಿ ಅಗತ್ಯವಿರುವ ಸ್ಥಳಗಳು. ಆದರೆ ಸೀಮಿತ ಸಂಖ್ಯೆಯಲ್ಲಿರುವ ಸಿಬ್ಬಂದಿಗಳನ್ನು ಎಲ್ಲೆಡಯೂ ನಿಯೋಜಿಲು ಸಾಧ್ಯವಾಗದೇ ಇರುವುದರಿಂದ ಇಕ್ಕಟ್ಟಿನ ಸ್ಥಿತಿಯಲ್ಲಿ ಪೊಲೀಸರು ಕೆಲಸ ನಿರ್ವಹಿಸ ಬೇಕಾಗಿದೆ. ಇನ್ನೂ ಅಪಘಾತ, ಟ್ರಾಫಿಕ್ ಜಾಂಗಳು ನಡೆದರಂತೂ ಸಿಬ್ಬಂದಿಗಳು ಒದ್ದಾಟವೇ ನಡೆಸ ಬೇಕು. ಠಾಣೆ ಒದಗಿಸಿರುವ ಸಕರ್ಾರ ಸಿಬ್ಬಂದಿ ನೇಮಕಾತಿಗೂ ಮುತುರ್ವಜಿ ತೋರಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಗೂಡಿನ ಬಳಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಪಶು ಯವೈದ್ಯಕೀಯ ಆಸ್ಪತ್ರೆಯ ಕಟ್ಟಡ ಇರುವ ಸ್ಥಳದಲ್ಲಿ ನೂತನ ಠಾಣೆ ನಿರ್ಮಿಸಲು ನಿರ್ಧರಿಸಲಾಗಿದೆ. ಸವೇ ಕಾರ್ಯ ನಡೆದಿದ್ದು ಕಡತ ತಾಲೂಕು ಕಚೇರಿಯಲ್ಲಿದೆ. ಸ್ವಂತ ಕಟ್ಟಡ ನಿರ್ಮಾಣವಾದರೆ ಬಾಡಿಗೆ ಪಾವತಿಸುವ ಹೊರೆ ತಪ್ಪುತ್ತದೆ- ಚಂದ್ರಶೇಖರಯ್ಯ, ಎಸೈ ಸಂಚಾರಿ ಠಾಣೆ.
ವಿರೋಧವಿದೆ: ಇಲ್ಲಿನ ಗೂಡಿನ ಬಳಿಯ ಪಶು ಯವೈದ್ಯಕೀಯ ಆಸ್ಪತ್ರೆಯನ್ನು ಆಯುಷ್ ಆಸ್ಷತ್ರೆ ಮಾಡಬೇಕು ಎಂದು ಇಲ್ಲಿನ ಸ್ಥಳಿಯ ಸಂಘಟನೆ ಮತ್ತು ಸಾರ್ವಜನಿಕರು 2013ರಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರು ಎಂದು ಹೇಳುತ್ತಾರೆ. ಅದಲ್ಲದೆ ಇಲ್ಲಿ ಸಂಚಾರಿ ಪೊಲೀಸ್ ಠಾಣೆ ಆರಂಭಗೊಳ್ಳುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.
