ಬಂಟ್ವಾಳ : ಇತ್ತೀಚೆಗೆ ಕನ್ನಡ ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಬಂದ ಹಿರಿಯ ಚಲನಚಿತ್ರನಟ ರಮೇಶ್ ಭಟ್ ರವರು ತುಳು ಭಾಷೆ ಮತ್ತು ಲಿಪಿಯನ್ನು ಕಲಿಯುವ ಆಸಕ್ತಿ ತೋರಿದರು.
ತುಳು ಲಿಪಿ ಶಿಕ್ಷಕ ನಿವೃತ್ತ ಕಂದಾಯ ಅಧಿಕಾರಿ ಬಿ.ತಮ್ಮಯ್ಯ ರವರು ಅವರಿಗೆ ತುಳು ಕಲಿಯಲು ಬೇಕಾದ ಪುಸ್ತಕಗಳನ್ನು ನೀಡಿದರು. ಒಂದು ವಾರ ತುಂಬಾ ಆಸಕ್ತಿಯಿಂದ ತುಳು ಕಲಿತರು ಎಂಬುದು ತುಳುವರಿಗೆ ಹೆಮ್ಮೆಯ ವಿಚಾರ. ಈ ಸಂದರ್ಭದಲ್ಲಿ ಚಿತ್ರ ತಂಡದ ಕಥೆಗಾರ ಎನ್.ಆರ್.ಕೆ.ವಿಶ್ವನಾಥ ಉಪಸ್ಥಿತರಿದ್ದರು.
