ಮೂಡುಬಿದರೆ: ದೂರಸಂಪರ್ಕ ಇಲಾಖೆಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಲಹಾ ಸಮಿತಿ ಸದಸ್ಯರಾಗಿ ಮೂಡುಬಿದರೆಯ ವಕೀಲ ಕೆ.ಆರ್.ಪಂಡಿತ್ ನೇಮಕಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಅವರ ಶಿಫಾರಸಿನ ಮೇರೆಗೆ ಈ ನೇಮಕ ನಡೆದಿದೆ.
ಕೆ. ಆರ್.ಪಂಡಿತ್ ಮೂಡುಬಿದರೆ ವಕೀಲರ ಸಂಘದ ಅಧ್ಯಕ್ಷರಾಗಿದ್ದು, ಇಲ್ಲಿನ ಶ್ರೀ ಮಹಾವೀರ ಕಾಲೇಜು, ಸಮಾಜ ಮಂದಿರ ಸಭಾ ಸಹಿತ ವಿವಿಧ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ವಿಶ್ವಸ್ಥ ಮಂಡಳಿಯ ಪದಾಧಿಕಾರಿಯಾಗಿದ್ದಾರೆ.
